Breaking News

ಮುನಿರತ್ನ ವಿಚಾರ: ಉಪ್ಪು ತಿಂದವರು ನೀರು ಕುಡಿಯಲೇಬೇಕು: ಜೋಶಿ

ಹುಬ್ಬಳ್ಳಿ: ಮುನಿರತ್ನ ವಿಚಾರದಲ್ಲಿ ನಾನು ಮಾತಾಡಿದಾಗ ಅನೇಕ ಬೆಳವಣಿಗೆ ಆಗಿವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅವರ ಮೇಲೆ ಗಂಭೀರ ಆರೋಪ ಇವೆ. ತನಿಖೆ ಆಗಲೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆರ್ ಅಶೋಕ್ ಶೋಭಾ ಕರಂದ್ಲಾಜೆ ಮೇಲೆ ದ್ವೇಷ ಮಾಡ್ತೀದಿರಿ. ನಿಮ್ಮ ಶಾಸಕರ ಮೇಲೆ ಕೇಸ್ ಹಾಕಿದ್ರು ಅರೆಸ್ಟ್ ಮಾಡಿಲ್ಲ. ಮುನಿರತ್ನ ಮೇಲೆ ರೇಪ್ ಇತ್ಯಾದಿ ಆರೋಪ ಇದೆ. ತನಿಖೆ ಮಾಡಲಿ ಹಾಗೆ ಉಳಿದವರನ್ನು ಅರೆಸ್ಟ್ ಮಾಡಲಿ ಎಂದರು. ಇನ್ನು ಗಣೇಶ ವಿಸರ್ಜನೆ ವೇಳೆ ಗಲಾಟೆ ಆಗಿವೆ. ಸಿಎಂ ಎರಡು ಘಟನೆ ನಡೆದಿವೆ ಅಂತಾರೆ,ಎರಡು ಯಾಕೆ ಘಟನೆ ನಡೆಯಬೇಕು.

ಕೊಪ್ಪಳದಲ್ಲಿ ಮಸೀದಿ ಬಂದ್ರೆ ಗಣೇಶ ನಿಲ್ಲಸಬೇಕಂತೆ. ನಾವು ಬೆಳಿಗ್ಗೆ ಪೂಜೆ ಮಾಡೋವಾಗ ನಮಾಜ್ ಮಾಡ್ತಾರೆ. ಹಾಗಾದ್ರೆ ನಮಾಜ್ ನಿಲ್ಲಿಸ್ತಾರಾ..? ಕೊಪ್ಪಳ, ನಾಗಮಂಗಲದಲ್ಲಿ ನಡೆದ ಘಟನೆ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಉದಾಹರಣೆಯಾಗಿದೆ. ನಾವು ಯಾವ ಗೊಡ್ಡು ಬೆದರಿಕೆಗೆ ಬಗ್ಗೋದಿಲ್ಲ. ವಿದೇಶ ನೆಲದಲ್ಲಿ ನಿಂತು ಭಾರತವನ್ನು ಅಪಮಾನ ಮಾಡೋದು ಸರಿ ಅಲ್ಲ. ಇದು ಅವರ ಅಪ್ರಬುದ್ಧತೆಗೆ ಸಾಕ್ಷಿ.

Share News

About Shaikh BigTv

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *