ನವಲಗುಂದ: ತಮ್ಮ ಆರೋಗ್ಯಕ್ಕೆ ಗಮನ ನೀಡದೆ ನಗರಕ್ಕೆ ಅಂದಚಂದ, ಆರೋಗ್ಯಕರ ಹಾಗೂ ಸೌಂದರ್ಯಿಕರಣಕ್ಕೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಕಾಯಕ ಶ್ಲಾಘನೀಯ ಎಂದು ಪುರಸಭಾ ಅಧ್ಯಕ್ಷ ಶಿವಾನಂದ ತಡಸಿ ಹೇಳಿದರು.
ಅವರು ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಭಾವಂತ ಮಕ್ಕಳಿಗೆ ಸರಕಾರ ಹಾಗೂ ನನ್ನ ವಯಕ್ತಿಕ ಸಹಾಯ ಸಹಕಾರ ಇದ್ದೆ ಇರುತ್ತದೆ ಎಂದರು.
ಈ ವೇಳೆ ಉಪಾಧ್ಯಕ್ಷೆ ಫರೀದಾ ಬಬರ್ಚಿ, ಸದಸ್ಯರಾದ ಮಹಾಂತೇಶ ಭೋವಿ, ಮಂಜು ಜಾಧವ, ಮೋದಿನಸಾಬ ಶಿರೂರ, ಅಪ್ಪಣ್ಣ ಹಳ್ಳದ, ಜೀವನ ಪವಾರ, ಮಾಂತೇಶ ಕಲಾಲ, ಬಸವರಾಜ ಈಟಿ, ಸಂತೋಷ ಪಾಟೀಲ, ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಮಗಿರಿ, ಶಿವಾನಂದ ಕದಂ ಇದ್ದರು. ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

