Breaking News

ಗಾಂಜಾ ಗೀಳಿಗೆ ಬಿದ್ದವರಿಗೆ ಬಿಸಿ ಮುಟ್ಟಿಸಿದ ಕಮಿಷನರ್

ಹುಬ್ಬಳ್ಳಿ: ಅವಳಿ ನಗರದಲ್ಲಿ ಗಾಂಜಾ ಗುಂಗಲ್ಲಿದ್ದ ಮಾದಕ ವ್ಯಸನಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು ಇಂದು 518 ಜನರಿಗೆ ವೈದ್ಯಕೀಯ ಪರೀಕ್ಷೆ, ಈ ಪೈಕಿ 147 ಜನರಿಗೆ ಪಾಸಿಟಿವ್ ಬಂದಿದ್ದು ಈ ಕುರಿತು 34 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ನಡೆದ ಜಾಗೃತಿ ಸಭೆ ಮಾದಕ ವ್ಯಸನಿ ಹಾಗೂ ಪೆಡ್ಲರ್ ಗಳಿಗೆ ಪೊಲೀಸ್ ರು ಪಾಲಕರ ಸಮ್ಮುಖದಲ್ಲಿ ವ್ಯಸನಿಗಳಿಗೆ ಬುದ್ದಿವಾದ ಹೇಳಿದರು. ಈ ವೇಳೆ ಕಮಿಷನರ್ ಎದುರು ಪಾಲಕರು ಕಣ್ಣೀರು ಹಾಕಿದರು.
ಖಡಕ್ ವಾರ್ನಿಂಗ್ ನೀಡಿದ ಪೊಲೀಸ್ ಕಮಿಷನರ್, ಈ ಹಿಂದೆ ಕಾರ್ಯಾಚರಣೆ ಮಾಡಿದಾಗ 63.67 ರಷ್ಟು ಪಾಸಿಟಿವ್ ಬಂದಿತ್ತು ಎರಡನೇ ಹಂತದಲ್ಲಿ 53% ಹಾಗೂ ಮೂರನೇ ಹಂತದಲ್ಲಿ 43% ಇತ್ತು ಇಂದಿನ ವೈದ್ಯಕೀಯ ಪರೀಕ್ಷೆಯಲ್ಲಿ ಶೇ 29 ಪಾಸಿಟಿವ್ ಬಂದಿದೆ ಅವಳಿ ನಗರವನ್ನು ಮಾದಕ ವ್ಯಸನ ಮುಕ್ತ ಮಾಡೋದೇ ನಮ್ಮ ಗುರಿ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *