ಹುಬ್ಬಳ್ಳಿ: ಲ್ಯಾಪ್ ಟಾಪ್ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ, ಕಾರ್ಮಿಕ ಇಲಾಖೆಯಲ್ಲಿ ನಡೆದಿದ್ದ ಲ್ಯಾಪ್ ಟಾಪ್ ಕಳ್ಳತನ ಪ್ರಕರಣದಲ್ಲಿ 26 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸರಿಂದ ಲ್ಯಾಪ್ ಟಾಪ್ ಗಳ ವಶಕ್ಕೆ ಪಡೆಯಲಾಗಿದೆ ಕಾರ್ಮಿಕರ ಮಕ್ಕಳಿಗಾಗಿ ಇದ್ದ 101 ಲ್ಯಾಪ್ ಟಾಪ್ ಕಳುವಾಗಿದ್ದವು, ಸೆಪ್ಟೆಂಬರ್ ನಲ್ಲಿ ಬೆಳಗಾವಿಯಿಂದ ತಂದು ಕಾರ್ಮಿಕ ಇಲಾಖೆಯಲ್ಲಿ ಇಡಲಾಗಿತ್ತು ಆಗಸ್ಟ್ ನಲ್ಲಿ ಪರಿಶೀಲನೆ ಮಾಡಿದಾಗ ಕಳುವಾಗಿದ್ದು ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ನೀಡಬೇಕಿದ್ದ ಲ್ಯಾಪ್ ಟಾಪ್ ಗಳು, ಸುಮಾರು 55 ಲಕ್ಷ ಮೌಲ್ಯದ ಹೆಚ್ ಪಿ ಕಂಪನಿಯ ಲ್ಯಾಪ್ ಟಾಪ್ ಗಳಾಗಿದ್ದವು ತನಿಖೆ ಕೈಗೊಂಡು ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿದಾಗ ಕಾರ್ಮಿಕ ಇಲಾಖೆಯ ದೀಪಕ್ ಮತ್ತು ಕೃಷ್ಣ ಕಳ್ಳತನ ಮಾಡಿದ್ರು, ಎಸ್ ಡಿ ಎ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 4 ಸಿಬ್ಬಂದಿಗಳು ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿ 6 ತಿಂಗಳು ಅವಧಿಯಲ್ಲಿ 101 ಲ್ಯಾಪ್ ಟಾಪ್ ಗಳನ್ನ ಕದ್ದಿದ್ದಾರೆ. ಕಿಟಕಿಯಿಂದ ಇಳಿದು ಕದ್ದು ಹಂತ ಹಂತವಾಗಿ ಮಾರಾಟ ಮಾಡಿದ್ದಾರೆ ಕದ್ದ ಲ್ಯಾಪ್ ಟಾಪ್ ಖರೀದಿಸಿದ್ದ 20 ಜನರ ಬಂಧನವಾಗಿದೆ ಕಾರ್ಮಿಕ ಇಲಾಖೆಯ ಆರು ಜನ ಸೇರಿ, ಒಟ್ಟು 26 ಜನರನ್ನ ಬಂಧಿಸಲಾಗಿದೆ. 83 ಲ್ಯಾಪ್ ಟಾಪ್, ಎರಡು ಆಟೋ, ಎರಡು ಬೈಕ್ ಹಾಗೂ ಒಂದು ಕಾರನ್ನ ವಶಕ್ಕೆ ಪಡೆದಿದ್ದೇವೆ ಹಿರಿಯ ಅಧಿಕಾರಿಗಳ ಕೈವಾಡ ಈ ಕೃತ್ಯದಲ್ಲಿ ಕಂಡು ಬಂದಿಲ್ಲ ಉಳಿದ ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎನ್ ಶಶಿಕುಮಾರ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

