Breaking News

ಅದ್ದೂರಿಯಾಗಿ ನೆರವೇರಿದ ಹಿಂದೂ ಮಹಾ ಗಣಪತಿ ವಿಸರ್ಜನೆ

ಹುಬ್ಬಳ್ಳಿ: 21 ದಿನಗಳ ಹುಬ್ಬಳ್ಳಿ ಧಾರವಾಡ ಹಿಂದೂ ಮಹಾ ಗಣಪತಿ ಉತ್ಸವ ಮಂಡಳಿ ಅಪ್ಪಾಜಿ ಜನ ಸೇವಾ ಟ್ರಸ್ಟ್ ಹಾಗೂ ನವಶಕ್ತಿ ಮಹಿಳಾ ಮಂಡಳ ವತಿಯಿಂದ, ಈ ಬಾರಿ ಈಶ್ವರನ ಅವತರಾದಲ್ಲಿ 21 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಈಗ ಅದ್ದೂರಿಯಾಗಿ ವಿಸರ್ಜನೆಗೊಂಡಿದೆ.

ನವನಗರದ ಪಂಚಾಕ್ಷರಿ ನಗರದಲ್ಲಿ ಅಪ್ಪಾಜಿ ಜನ ಸೇವಾ ಟ್ರಸ್ಟ್ ಹಾಗೂ ನವಶಕ್ತಿ ಮಹಿಳಾ ಮಂಡಳ ಎರಡು ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡ್ತಾ ಬಂದಿದ್ದಾರೆ. ಈ ಬಾರಿ ಗಣಪತಿ ವಿಸರ್ಜನೆಯನ್ನು ಅಪ್ಪಾಜಿ ಜನಸೇವಾ ಟ್ರಸ್ಟ್ ಅದ್ದೂರಿಯಾಗಿ ಜರುಗಿಸಿದರು. ಡಿಜೆ ಹಾಡಿಗೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು, ಮಹಿಳೆಯರು, ಯುವತಿಯರು ಹೀಗೆ ಜನ ಸಾಗರ ಹಿಂದೂ ಮಹಾಗಣಪತಿ ವಿಸರ್ಜನೆಯಲ್ಲಿ ಭಾಗವಹಿಸಿದ್ದರು.

ಹೀಗೆ ಅದ್ದೂರಿಯಾಗಿ ಕಾರ್ಯಕ್ರಮ ಮತ್ತು ಗಣಪತಿ ವಿಸರ್ಜನೆ ಮಾಡಿದ್ದಕ್ಕೆ ವಿಜಯಕುಮಾರ್ ಅಪ್ಪಾಜಿ ಅವರಿಗೆ ಜನರು ಅಭಿನಂದನೆ ಸಲ್ಲಿಸಿದ್ದಾರೆ.

Share News

About Shaikh BigTv

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *