ಬೆಳಗಾವಿ: ಇಲ್ಲಿನ ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ನಿಂದ ಕೊಡಮಾಡುವ 2021-22ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ವಿಮರ್ಶೆ-ಸಂಶೋಧನೆ, ಜಾನಪದ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಲಾಗಿದೆ.ಡಾ.ಸಿ.ಎನ್. ರಾಮಚಂದ್ರನ್ (ವಿಮರ್ಶೆ-ಸಂಶೋಧನೆ), ಡಾ.ಎನ್.ಆರ್. ನಾಯ್ಕ್ (ಜಾನಪದ) ಮತ್ತು ಪದ್ಮರಾಜ ದಂಡಾವತಿ (ಡಾ.ಬೆಟಗೇರಿ ಕೃಷ್ಣಶರ್ಮ ಪತ್ರಕರ್ತ ಪ್ರಶಸ್ತಿ) ಅವರಿಗೆ ನೀಡಲು ಟ್ರಸ್ಟ್‌ನ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
ಪ್ರಶಸ್ತಿಯು ತಲಾ ₹ 50ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. ಪ್ರದಾನ ಸಮಾರಂಭವನ್ನು ಏಪ್ರಿಲ್‌ನಲ್ಲಿ ನಡೆಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

