ಕುಂದಗೋಳ : ಯುವಕನೋರ್ವನಿಗೆ ಕ್ಯಾಂಟರ್ ವಾಹನ ಡಿಕ್ಕಿಪಡಿಸಿ ಅಪಘಾತ ಮಾಡಿದ ಘಟನೆ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದ ಕೆಂಪಗೇರಿ ಕ್ರಾಸ್ ಬಳಿ ನಡೆದಿದೆ.
ಬೆಟದೂರು ಕುಬಿಹಾಳ ರಸ್ತೆ ಮಾರ್ಗವಾಗಿ ಮೇಲೆ ವೇಗವಾಗಿ ಕ್ಯಾಂಟರ್ ವಾಹನ ಚಲಾಯಿಸಿಕೊಂಡು ಬಂದು ವಾಹನ ಚಾಲಕ ನಾಗರಾಜ್ ಕುಂಡೆಪ್ಪ ಕುಂದರಗಿ ಎಂಬಾತ ರಸ್ತೆ ಬದಿ ಸಾರಿಗೆ ಬಸ್ ದಾರಿ ಕಾಯುತ್ತಲಿದ್ದ ಮೊಹಮ್ಮದಗೌಸ್ ಎಂಬ ಯುವಕನೋರ್ವನಿಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದಾನೆ.ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಕೆಎ-25 ಸಿ-7841 ಸಂಖ್ಯೆ ವಾಹನವೇ ಅಪಘಾತ ಪಡಿಸಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

