Breaking News

ಎಲ್‌ಇಡಿ ಬಲ್ಟ್ ನೆಪದಲ್ಲಿ ಜನರಿಗೆ ಪಂಗನಾಮ : ಇದೀಗ ಪೋಲಿಸರ್ ಅತಿಥಿ

ಧಾರವಾಡ: ರಿಷಬ್ ಸ್ಮಾಲ್ ಎಂಟರ್‌ಪ್ರೈಸೆಸ್‌ ಮಾಲೀಕರಾದ ರಾಜಶೇಖರ ಚಿಕ್ಕಮಠ ಹಾಗೂ ಸರೋಜಾ ಚಿಕ್ಕಮಠ ಎಲ್‌ಇಡಿ ಬಲ್ಟ್ ನೆಪದಲ್ಲಿ ಬರೋಬ್ಬರಿ ನಲವತ್ತಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿ ಎಸ್ಕೆಪ್ ಆಗಿದ್ದರು. ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡ ಶಹರ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಳಿಕ ಮೋಸ ಹೋದ ಜನರು ಪೊಲೀಸ್‌ ಠಾಣೆಗೆ ದೂರು ನೀಡಿ, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು.ಅದರಂತೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಎಸಿಪಿ ಪ್ರಶಾಂತ ಸಿದ್ದನಗೌಡರ ಅವರು ವಿಶೇಷ ತಂಡ ರಚಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಎರಡು ದಿನಗಳ ಕಾಲ ಆಟ ಆಡಿಸಿದ್ದ ಆರೋಪಿ ರಾಜಶೇಖರ ಚಿಕ್ಕಮಠ ಹಾಗೂ ಸರೋಜಾ ಚಿಕ್ಕಮಠ ಅವರನ್ನು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.

ರಾಜಶೇಖರ ಹಾಗೂ ಸರೋಜಾ ದಪಂತಿ ಧಾರವಾಡದ ಮದಿಹಾಳ ಲಾಸ್ಟ್ ಬಸ್ ಸ್ಟಾಪ್ ಬಳಿಯಲ್ಲಿ ರಿಷಬ್ ಸ್ಮಾಲ್ ಎಂಟರಪ್ರೈಸೆಸ್‌ ತೆರೆದು, ಎಲ್‌ಇಡಿ ಬಲ್ಟ್ ತಯಾರಿಸುವ ಸ್ಟ್ರೀಮ್ ಬ್ಯುಸಿನೆಸ್ ನಡೆಸುತ್ತಿದ್ದರು. ಆಸಕ್ತರು 11 ಸಾವಿರ ಹಣವನ್ನು ಮೊದಲು ಡೆಪಾಸಿಟ್ ಮಾಡಿದರೆ 50 ಬಲ್ಫ್ ತಯಾರಿಸುವ ಕಚ್ಚಾ ವಸ್ತುಗಳ ಒಂದು ಕಿಟ್ ಕೊಟ್ಟು, ತಯಾರಿಸಿ ಮರಳಿ ನೀಡಿದ ಬಲ್ಫ್’ಗಳಿಗೆ 3500 ರೂಪಾಯಿ ಸಂಬಳ ಕೊಡುತ್ತಿದ್ದರು. ಇದೇ ರೀತಿ ನಲವತ್ತು ಜನರ ಕಡೆ 15, 20, 40, 50 ಸಾವಿರ ಹಣ ಪಡೆದು ಮೋಸ ಮಾಡಿದ್ದಾರೆ.

ಮೋಸ ಮಾಡಿದ್ದ ರಿಷಬ್‌ ಸ್ಮಾಲ್‌ ಎಂಟರ್‌ಪ್ರೈಸೆಸ್‌ ಮಾಲೀಕರ ವಿರುದ್ಧ ಬಸನಗೌಡ ದೂರ ನೀಡುತ್ತಲೇ ಅದೆಷ್ಟೋ ಜನರು ಸಹ ಅಲರ್ಟ್ ಆಗಿದ್ದಾರೆ.

ಇದು ಅಷ್ಟೇ ಅಲ್ಲದೇ ಜನರಿಗೆ ಕಳಪೆ ದರ್ಜೆ ಬಲ್ಸ್‌ಗಳನ್ನು ರಾಜಶೇಖರ ಹಾಗೂ ಸರೋಜಾ ಮಾರಾಟ ಮಾಡುವ ಪ್ಲಾನ್ ರೂಪಿಸಿರುವುದು ಬೆಳಕಿಗೆ ಬಂದಿದೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಕಾಡದೇವರಮಠ, ಪಿಎಸ್‌ಐ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *