Breaking News

ರಾಷ್ಟ್ರಮಟ್ಟದ ಮಿಸ್ ಊರ್ವಶಿ ಸೌಂದರ್ಯ ಸ್ಪರ್ಧೆಯಲ್ಲಿ ಧಾರವಾಡದ ವರ್ಶಿನಿ ರಾಮಡಗಿ ವಿನ್ನರ್

.ಹುಬ್ಬಳ್ಳಿ : ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ಮಿಸ್ ಇಂಟರ್ ಕ್ವಾಂಟಿನೆಂಟಲ್ ಹಾಗೂ ಎಲೀಟ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಮಿಸ್ ಊರ್ವಶಿ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಧಾರವಾಡದ ವರ್ಶಿನಿ ರಾಮಡಗಿ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ‌ ಎಂದು ವರ್ಷಿಣಿ ತಾಯಿ ಮಂಜುಳಾ ರಾಮಡಗಿ ಹೇಳಿದರು.

ವರ್ಶಿನಿ ರಾಮಡಗಿ

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಶಿನಿ ಮಿಸ್ ಊರ್ವಶಿಯಾಗಿ ವಿನ್ನರಾಗಿದ್ದು, ಒಟ್ಟು 25 ರಾಜ್ಯಗಳಿಂದ 18 ರಿಂದ 25 ವರ್ಷದೊಳಗಿನ 25 ಮಾಡೆಲ್​ಗಳು ಈ ಸ್ಪರ್ಧೆಯಲ್ಲಿದ್ದರು. ಸ್ಪರ್ಧೆಯಲ್ಲಿ ಗೆಲುವು ಕಂಡು ಮಿಸ್ ಊರ್ವಶಿ ಕಿರೀಟ​ವನ್ನು ಕರ್ನಾಟಕಕ್ಕೆ ತಂದುಕೊಟ್ಟಿದ್ದಾರೆ.

ಫರ್ದಿನಖಾನ್

ವರ್ಶಿನಿ ಮುಂದೆ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದರು.

ವಿದ್ಯಾಭ್ಯಾಸದ ಜೊತೆಗೆ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲಿನಿಂದಲೂ ತನ್ನ ಪ್ರತಿಭೆ ತೋರಿಸುವಲ್ಲಿ ಪರಿಣಿತರಾಗಿರುವ ವರ್ಶಿನಿ ಈಗಾಗಲೇ ಎರಡು ಬಾರಿ ಮಿಸ್ ಧಾರವಾಡ ಆಗಿ ಹೊರಹೊಮ್ಮಿರುವುದು ವಿಶೇಷವಾಗಿದೆ ಎಂದರು.

ಫೀರ್ದಾಸ್ ಹನ್ಸ್

ಪತ್ರಿಕಾಗೋಷ್ಠಿಯಲ್ಲಿ ವರ್ಷಿಣಿ, ಫಿರ್ದೋಸ್, ಮೊಹಮ್ಮದ್ ಯೂಸುಫ್ ಹನ್ಸಿ, ಸೌಕರ್ ಸೇರಿದಂತೆ ಉಪಸ್ಥಿತರಿದ್ದರು.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *