Breaking News

ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಯಶಸ್ವಿ

ಕುಂದಗೋಳ: ಈ ಹಿಂದೆ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕರಿಸಿ ಜಯಂತಿ ದಿನವೇ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದ ಸಮಾಜ ಬಾಂಧವರು ಇಂದಿನ ಸಭೆ ಯಶಸ್ವಿ ಮಾಡಿದ್ದಾರೆ.

ವಾಲ್ಮೀಕಿ ಭವನ ನಿರ್ಮಾಣ ವಿಷಯವಾಗಿ ತಾರ್ಕಿಕ ಅಂತ್ಯ ಸಿಗದೆ ಮತ್ತು ತಾಲೂಕು ವಿವಿಧ ಇಲಾಖೆಗಳ ಮುಖ್ಯ ಅಧಿಕಾರಿಗಳು ಪೂರ್ವಭಾವಿ ಸಭೆಗೆ ಗೈರಾದ ವಿಷಯವಾಗಿ ವಾಲ್ಮೀಕಿ ಜಯಂತಿ ಸಭೆ ರದ್ದು ಮಾಡಿ ಅಕ್ಟೋಬರ್ 17ರ ಜಯಂತಿ ದಿನವೇ ಪ್ರತಿಭಟನೆ ಎಚ್ಚರಿಕೆ ಎಸ್.ಸಿ/ಎಸ್.ಟಿ ಸಮಾಜ ಬಾಂಧವರಿಂದ ಕೇಳಿ ಬಂದಿತ್ತು.

ಇದೀಗ ಇಂದು ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ತಹಶೀಲ್ದಾ‌ರ್ ರಾಜು ಮಾವರಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಮಾಜ ಬಾಂಧವರು ಯಶಸ್ವಿ ಮಾಡಿದ್ದಾರೆ.

ಪ್ರಸ್ತುತ ವರ್ಷದ ವಾಲ್ಮೀಕಿ ಜಯಂತಿ ಅಚ್ಚುಕಟ್ಟಾಗಿ ಎಲ್ಲಾ ಇಲಾಖೆಗಳಲ್ಲಿ ಆಚರಿಸುವುದು ಮತ್ತು ಜಯಂತಿಯನ್ನು ಅದ್ಧೂರಿಯಾಗಿ ಮಾಡುವುದು, ಮುಂಬರುವ ದಿನಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಿಸ್ತುಬದ್ಧ ಯೋಜನೆ ರೂಪಿಸುವ ವಿಶ್ವಾಸಕ್ಕೆ ಸಮಾಜದವರು ಬದ್ಧರಾಗಿದ್ದಾರೆ.

Share News

About Shaikh BigTv

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *