Breaking News

ಪೈಗಂಬರ್ ರ ವಿರುದ್ಧ ಅವಹೇಳನಕಾರಿ ಪೋಸ್ಟ್: ಅಂಜುಮನ್ ಸಂಸ್ಥೆಯಿಂದ ರಾಷ್ಟ್ರಪತಿಗೆ ಮನವಿ

ಹುಬ್ಬಳ್ಳಿ: ಪವಿತ್ರ ಪ್ರವಾದಿ ಹಜರತ ಮುಹಮ್ಮದ್ ಪೈಗಂಬರ್ ಅವರ ಕುರಿತು ತನ್ನ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮ‌ೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಮ್ಮದ್ ಪೈಗಂಬರಿಗೆ ಅವಹೇಳನಕಾರಿ ನಿಂದನೆ ಮಾಡಿ ಶಾಂತಿ ಸುವ್ಯವಸ್ಥೆ ಹಾಗೂ ಸಹೋದರತೆಗೆ ಭಂಗ ತರುವ ದುರುದ್ದೇಶದಿಂದ ಹಾಗೂ ಮುಸ್ಲಿಮರ ಅಸ್ಮಿತೆಯನ್ನು ಪ್ರಶ್ನಿಸುವ ಒಂದು ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವುದು ಖಂಡನೀಯವಾಗಿದೆ. ಕೂಡಲೇ ಯತಿ ನರಸಿಂಘಾನಂದ ಎಂಬ ದುಷ್ಟ ಅವಿವೇಕಿಯನ್ನು ಈ ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವುವಂತೆ ಆಗ್ರಹಿಸಿದರು.

ಉತ್ತರ ಪ್ರದೇಶದ ಗಾಜಿಯಾಬಾದಿನ ನಿವಾಸಿ ಯತಿ ನರಸಿಂಘಾನಂದ ಎಂಬಾತ ದುಷ್ಟ, ಅವಿವೇಕಿಯು ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ತನ್ನ ಕೊಳಕು ನಾಲಿಗೆಯಿಂದ (ಮಾಜ್ ಅಲ್ಲಾಹ) ತನ್ನ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಟ್ಟಿದ್ದಾನೆ. ದೇಶದಲ್ಲಿ ಶಾಂತಿಗೆ ಭಂಗ ತರುವ ಹಾಗೂ ಕೋಮು ಸ್ವರ್ಹಾದತೆಗೆ ಧಕ್ಕ ತರುವ ದುರುದ್ದೇಶದಿಂದ ತಾನು ಈ ಕೃತ್ಯ ಎಸಗುವ ಮೂಲಕ ಇಡೀ ಜಗತ್ತಿನ ಹಾಗೂ ಭಾರತದ ಮುಸ್ಲಿಂ ಸಮುದಾಯದ ಅಸ್ಮಿತೆಯನ್ನೆ ಪ್ರಶ್ನಿಸುವ ಗೋಜಿಗೆ ಕೈ ಹಾಕಿದ್ದು ವಿಷಾದಕರ ಸಂಗತಿ ಇದರಿಂದ ಇಡೀ ಮುಸ್ಲಿಂ ಸಮುದಾಯ ರೊಚ್ಚಿಗೆದ್ದಿದ್ದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪವಿತ್ರ ಪ್ರವಾದಿಯವರ ಬಗ್ಗೆ ಈ ನೀಚ ಮನುಷ್ಯ ತನ್ನ ಬಾಯಿ ಚಪಲವನ್ನು ತೀರಿಸಿಕೊಳ್ಳಲು ತೀರಾ ತುಚ್ಚ ಪದಗಳನ್ನು ಬಳಸಿದರೂ ಕೂಡ ಮುಸ್ಲಿಂ ಸಮುದಾಯ ರಾಷ್ಟ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಆತನಿಗೆ ಕೂಡಲೇ ಬಂಧಿಸಿ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಬೇರೆ ಯಾರು ಇಂಥಹ ನೀಚ ಕೃತ್ಯಕ್ಕೆ ಮುಂದಾಗದಂತೆ ಕಠಿಣ ಶಿಕ್ಷೆಗೆ ಒಳಪಡಿಸಿಬೇಕೆಂದು ಕಳಕಳಿಯಿಂದ ಆಗ್ರಹ ಪಡಿಸುತ್ತದೆ ಎಂದು ಘೋಷಣೆ ಕೂಗಿದರು.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *