Breaking News

ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವು ಮಾಡದಂತೆ ಶಾಂತಿಯುತ ಪ್ರತಿಭಟನೆ

ಕುಂದಗೋಳ: ಗುಡೇನಕಟ್ಟಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಅಭಿಮಾನಿಗಳು ಬೀಡು ಬಿಟ್ಟಿದ್ದು, ಪ್ರತಿಷ್ಠಾಪಿಸಿದ ಮೂರ್ತಿ ತೆರವು ಮಾಡದಂತೆ ಶಾಂತಿಯುತ ಪ್ರತಿಭಟನೆ ಕೈಗೊಂಡಿದ್ದಾರೆ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಬುಧವಾರ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ರಾಜು ಮಾವರಕರ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಧಿಕಾರಿಗಳ ಆದೇಶಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ವಿಷಯ ಚರ್ಚೆಯಲ್ಲಿದೆ.

ಈಗಾಗಲೇ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವು ಮಾಡದಂತೆ ಸಂಘಟಕರು ತಹಶೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೂ ಮನವಿ ಸಹ ಸಲ್ಲಿಸಿದ್ದಾರೆ. ಪ್ರಸ್ತುತ ಮೂರ್ತಿ ತೆರವು ಮಾಡದಂತೆ ಒತ್ತಾಯ ಹೆಚ್ಚಾಗಿದೆ.

Share News

About Shaikh BigTv

Check Also

ಪಿಎಸ್‌ಐ ಜೊತೆ ಮಾತಿನ ಚಕಮಕಿ ಪ್ರಕರಣ: ಐಶ್ವರ್ಯಗೌಡರಿಂದ ಬೇಷರತ್ ಕ್ಷಮೆಯಾಚನೆ

ಮಂಡ್ಯ ಜಿಲ್ಲೆಯ ಪಾಂಡವಪುರದ ಉಕ್ಕಡ ಮಾರಮ್ಮ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ನಡೆದ ಮಾತಿನ ಚಕಮಕಿಗೆ …

Leave a Reply

Your email address will not be published. Required fields are marked *