Breaking News

ದೇವರಿಗೆ ಕೈ ಮುಗಿದು ಹಣೆಗೆ ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ : ಸಿಸಿಟಿವಿಯಲ್ಲಿ ಕೃತ್ಯ ಸೆರೆ!

ಚಾಮರಾಜನಗರ : ಇಲ್ಲೊಬ್ಬ ಕಳ್ಳ ವಿಚಿತ್ರವಾಗಿ ದೇವಸ್ಥಾನದ ಹುಂಡಿ ಕಳ್ಳತನ ಮಾಡಿದ್ದಾನೆ. ಕಳ್ಳತನಕ್ಕು ಮೊದಲು ದೇವರಿಗೆ ಕೈಮುಗಿದು ಬಳಿಕ ಹಣೆಗೆ ಕುಂಕುಮ ಹಚ್ಚಿಕೊಂಡು ಅಲ್ಲಿಯೇ ಇದ್ದ ಹುಂಡಿಯ ಹಣ ಕದ್ದು ಖತರ್ನಾಕ್ ಕಳ್ಳ ಪರಾರಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹೌದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಶಕ್ತಿ ದೇವತೆ ಶ್ರೀ ಪಟ್ಟದರಾಣಿ ದೇವಾಲಯದ ಹುಂಡಿ ಹಣ ಕಳವಾಗಿದೆ. ಓರ್ವ ಕಳ್ಳ ದೇವರಿಗೆ ಕೈ ಮುಗಿದು ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದಿದ್ದಾನೆ. ಈ ಹಿಂದೆಯೂ ಹುಂಡಿ ಹಣ ಕಳ್ಳತನವಾಗಿದ್ದು, ನಂತರ ಸಿಸಿಟಿವಿ ಅಳವಡಿಸಲಾಗಿತ್ತು. ದೇಗುಲದ ಮುಖ್ಯ ಬಾಗಿಲಿಗೆ ನೇತು ಹಾಕಿದ್ದ ಹುಂಡಿಯ ಬೀಗ ಒಡೆದ ಕಳ್ಳ, ಹಣ ಎಗರಿಸಿದ್ದಾನೆ. ಬೆಡ್​ಶೀಟ್ ಹೊದ್ದುಕೊಂಡು ಬಂದಿರುವ ಆತ, ಮೊದಲಿಗೆ ದೇವರಿಗೆ ಕೈ ಮುಗಿದು ಬಳಿಕ ಕುಂಕುಮ ಹಚ್ಚಿಕೊಂಡಿದ್ದಾನೆ. ನಂತರ, ಹುಂಡಿಯ ಬೀಗ ತೆರೆದು ನೋಟುಗಳನ್ನು ಕೈ ತುಂಬಾ ಹಿಡಿದು ಬ್ಯಾಗ್​ಗೆ ತುಂಬಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

Share News

About BigTv News

Check Also

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ …

Leave a Reply

Your email address will not be published. Required fields are marked *