ಹೊಸಪೇಟೆ : ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 84,504 ಕ್ಯುಸೆಕ್‌ನಷ್ಟಿದ್ದು, 82,504 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಈ ಪೈಕಿ ಸುಮಾರು 11 ಸಾವಿರ ಕ್ಯುಸೆಕ್‌ನಷ್ಟು ನೀರು ಕಾಲುವೆಗಳಿಗೆ ಹರಿಯುತ್ತಿದ್ದು, 71 ಸಾವಿರ ಕ್ಯುಸೆಕ್‌ನಷ್ಟು ನೀರು 20 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಯುತ್ತಿದೆ.
ತುಂಗಭದ್ರಾ ಮಂಡಳಿ ಶನಿವಾರ ಮೊದಲಿಗೆ 18 ಗೇಟ್‌ಗಳನ್ನು ತೆರೆದಿತ್ತು. ಬಳಿಕ ಇನ್ನೂ ಎರಡು ಗೇಟ್‌ಗಳನ್ನು ತೆರೆಯುವ ಮೂಲಕ ಅಧಿಕ ನೀರು ಹರಿಸುವ ಕ್ರಮ ಕೈಗೊಂಡಿತು. ಒಳಹರಿವು ಪ್ರಮಾಣ ಹೆಚ್ಚಾದರೆ 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡುವ ಸಾಧ್ಯತೆ ಇದೆ ಎಂದು ಮಂಡಳಿ ಎಚ್ಚರಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





