Breaking News

ಅವಾಚ್ಯ ಪದಗಳಿಂದ ನಿಂದನೆ: ಆತನಿಗೆ ಹಿಗ್ಗಾಮುಗ್ಗಾ ಥಳಿತ

ಹುಬ್ಬಳ್ಳಿ: ಆರ್‌ಎಸ್‌ಎಸ್‌ ಕಾರ್ಯಕರ್ತರು ಪಥಸಂಚಲನ ಮಾಡುತ್ತಿರುವ ವೇಳೆಯಲ್ಲಿ ಸಿಬಿಟಿ ಬಾಕಳೆ ಗಲ್ಲಿಯಲ್ಲಿ ಕಿಡಿಗೇಡಿಯೊಬ್ಬ ಅಡ್ಡ ನಿಂತು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಆಗ ಅಲ್ಲೇ ಇದ್ದ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇಂದು ಆರ್‌ಎಸ್‌ಎಸ್ ವತಿಯಿಂದ ಹುಬ್ಬಳ್ಳಿಯ ನೆಹರೂ ಮೈದಾನದಿಂದ ಪಥಸಂಚಲನ ಆರಂಭವಾಗಿದ್ದು, ಸಿಬಿಟಿ ಬಾಕಳೆ ಗಲ್ಲಿಯಲ್ಲಿ ಕಾರ್ಯಕರ್ತರು ಪಥಸಂಚಲನ ಮಾಡುತ್ತಿದ್ದಾಗ ಕಿಡಿಗೇಡಿಯೊಬ್ಬ ಅಡ್ಡ ನಿಂತಿದ್ದಾನೆ. ಆ ಸಂದರ್ಭ ಅಲ್ಲಿದ್ದ ಸಾರ್ವಜನಿಕರು ಸೈಡ್ ಗೆ ಬಾ ಎಂದು ಸೂಚಿಸಿದ್ದಾರೆ. ಆದರೆ, ಸೈಡ್ ಗೆ ಬಂದ ಆ ವ್ಯಕ್ತಿ, ಕಾರ್ಯಕರ್ತರಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಇದನ್ನು ಕೇಳಿಸಿಕೊಂಡ ಸಾರ್ವಜನಿಕರು ಆತನಿಗೆ ಸಖತ್ ಗೂಸಾ ಕೊಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

Share News

About Shaikh BigTv

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *