Breaking News

ಗರ್ಭಿಣಿಯ ವೇಷ ಧರಿಸಿ ಭ್ರೂಣಲಿಂಗ ಪತ್ತೆ ಕೇಂದ್ರಕ್ಕೆ ಎಸಿ ಭೇಟಿ – ಕರಾಳ ಜಾಲ ಬಯಲು!

ಬಾಗಲಕೋಟೆ: ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣಹತ್ಯೆ ಜಾಲದ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರದ ಜತ್ತ ತಾಲೂಕಿನ ವಿವಿಧೆಡೆ ದಾಳಿ ನಡೆಸಿದ್ದಾರೆ. ಮಹಿಳಾ ಅಧಿಕಾರಿಗಳು ಗರ್ಭಿಣಿ ಹಾಗೂ ಸಂಬಂಧಿಕರಂತೆ ಮಾರುವೇಷದಲ್ಲಿ ಜಾಲದೊಳಗೆ ಪ್ರವೇಶಿಸಿ ಮಾಹಿತಿ ಕಲೆಹಾಕಿದ್ದರು. ಮಹಾಲಿಂಗಪುರದ ನಕಲಿ ವೈದ್ಯೆ ಕವಿತಾ ನೀಡಿದ ಮಾಹಿತಿ ಆಧರಿಸಿ ಜಾಡರ ಬಬಲಾದಿ, ಕರ್ಜಗಿ ಸೇರಿದಂತೆ ಹಲವು ಕಡೆ ದಾಳಿ ನಡೆಸಲಾಗಿದ್ದು, ಅಕ್ರಮ ಸ್ಕ್ಯಾನಿಂಗ್ ಯಂತ್ರ, ಎಂಟಿಬಿ ಡ್ರಗ್ಸ್ ಹಾಗೂ ಎರಡು ಇಂಜೆಕ್ಷನ್‌ಗಳು ಪತ್ತೆಯಾಗಿವೆ. ನಿಖಿಲ್ ತೇಲಿ ಹಾಗೂ ದಾನಮ್ಮ ತೇಲಿಯನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಡಾ. ಸಂಜಯ್ ವಾಘ್ಮೋರೆ ಪರಾರಿಯಾಗಿದ್ದಾನೆ. ಇದರ ನಡುವೆ ಬಾಗಲಕೋಟೆ ಆರೋಗ್ಯ ಇಲಾಖೆಯ ಅಧಿಕಾರಿಗಳ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ. ಮಹಾಲಿಂಗಪುರದಿಂದ ಜತ್ತ ತಾಲೂಕಿನವರೆಗೆ ಜಾಲ ವಿಸ್ತರಿಸಿರುವ ಶಂಕೆ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮುಂದುವರಿದಿದ್ದು, ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Share News

About BigTv News

Check Also

ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿಯೊದಿಗೆ ನಿರಂತರ ಸಂಪರ್ಕ: ಕಾನ್ಸ್‌ಟೇಬಲ್‌ ಸಸ್ಪೆಂಡ್

ಚಿಕ್ಕಮಗಳೂರು: ತಲೆಮರೆಸಿಕೊಂಡಿರುವ ಅತ್ಯಾಚಾರ ಆರೋಪಿಯೊಂದಿಗೆ ನಿರಂತರ ಸಂಪರ್ಕ ಹೊಂದಿ, ಪೊಲೀಸ್ ತನಿಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದ ಮೇಲೆ …

Leave a Reply

Your email address will not be published. Required fields are marked *