Breaking News

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಶೇ.4.70 ರಷ್ಟು ಇಳಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದಲ್ಲಿ 4.70ರಷ್ಟು ಇಳಿಕೆಯಾಗಿದ್ದು, ಎರಡು ವಾರದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಕಾರಣ ಕಳೆದ ಎರಡು ವಾರದಿಂದ ಕಚ್ಚಾ ತೈಲ ಬೆಲೆ ಏರಿಕೆಯ ಹಾದಿಯಲ್ಲಿತ್ತು.
ಉತ್ಪಾದನೆ ಮತ್ತು ಸಂಗ್ರಹಾಗಾರಗಳ ಮೇಲೆ ವಾಯು ದಾಳಿ ನಡೆಸುವುದಿಲ್ಲವೆಂದು ಇಸ್ರೇಲ್ ಘೋಷಿಸಿರುವುದಾಗಿ ವರದಿಯಾಗಿದೆ.
ಹೀಗಾಗಿ ತೈಲಪೂರೈಕೆ ಸರಪಳಿಗೆ ಎದುರಾಗಿದ್ದ ಆತಂಕ ದೂರವಾಗಿದೆ. ಆಮದು ರಾಷ್ಟ್ರಗಳಿಂದ ಬೇಡಿಕೆ ಕಡಿಮೆಯಾಗಿದ್ದು, ಇದರ ಕಾರಣ ಕಚ್ಚಾ ತೈಲ ದರ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಬ್ರೆಂಟ್ ಕಚ್ಚಾ ತೈಲದರ ಬ್ಯಾರೆಲ್ ಗೆ 3.51 ಡಾಲರ್ ಇಳಿಕೆಯಾಗಿದ್ದು, ಪ್ರಸ್ತುತ ಬ್ಯಾರಲ್ ಗೆ 73.81 ಡಾಲರ್ ದರ ಇದೆ. ಟೆಕ್ಸಾಸ್ ಇಂಟರ್ ಮೀಡಿಯೇಟ್ ಕಚ್ಚಾತೈಲದ ದರ 3.48 ಡಾಲರ್ ನಷ್ಟು ಕಡಿಮೆಯಾಗಿದ್ದು, ಬ್ಯಾರೆಲ್ ಗೆ 70.35 ಡಾಲರ್ ದರ ಇದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *