ಮಂತ್ರಲಾಯ: ರಾಯರ 353 ನೇ ಆರಾಧನಾ ಮಹೋತ್ಸವ ಇರುವುದರಿಂದ ಗುರು ರಾಯರ ಪೂರ್ವಾರಾಧನೆ ಮಂತ್ರಾಲಯದಲ್ಲಿ ಸಂಭ್ರಮದಿಂದ ನಡೆಯುತ್ತಿದೆ.
ಇಂದು ಆರಾಧನಾ ಮೂರನೇ ದಿನವಾಗಿದ್ದು, ಬೆಳಿಗ್ಗೆಯಿಂದಲೇ ಮಠದಲ್ಲಿ ವಿವಿಧ ಪೂಜ ಕೈಂಕರ್ಯಗಳು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ನಡೆಯುತ್ತಿದೆ. ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ ನಡೆದಿದ್ದು, ರಾಯರ ಮೂಲ ಬೃಂದಾವನಕ್ಕೆ ವಿಶೇಷ ಅಭಿಷೇಕ ನಡೆದಿದೆ. ಪೀಠಾಧಿಪತಿಗಳಿಂದ ಮೂಲ ರಾಮ ದೇವರ ಪೂಜೆ, ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ, ಹಸ್ತೋದಕ ಜರಿಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

