Breaking News

ಚೆನ್ನೈ | ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಚೆನ್ನೈ : ‘ತಿರುವಳ್ಳೂರ್‌ ಜಿಲ್ಲೆಯ ‘ಸೇಂಟ್‌ ಪೀಟರ್ಸ್‌ ಪೌಲ್‌ ಸೀಫುಡ್‌ ಎಕ್ಸ್‌ಪೋರ್ಟ್‌ ಪ್ರೈವೇಟ್‌ ಲಿಮಿಟೆಡ್‌’ ಹೆಸರಿನ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಂ ಅನಿಲ ಸೋರಿಕೆಯಿಂದಾದ ಅವಗಢದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ’ ಎಂದು ಕಾರ್ಮಿಕ ಅಭಿವೃದ್ಧಿ ಸಚಿವ ಜೆ.ಮೊಹಮ್ಮದ್‌ ಫರ್ವಾಸ್‌ ಅವರು ಸೋಮವಾರ ವಿಧಾನಸಭೆಗೆ ಮಾಹಿತಿ ನೀಡಿದರು. ‘ಅನಿರೀಕ್ಷಿತವಾಗಿ ಪೈಪ್‌ಲೈನ್‌ನಲ್ಲಿ ಅನಿಲ ಸೋರಿಕೆಯಾಗಿದೆ. ಇದರಿಂದ 74 ಕಾರ್ಮಿಕರಿಗೆ ಉಸಿರಾಟದ ಸಮಸ್ಯೆ ಉಂಟಾಯಿತು. ಈ ಪೈಕಿ 70 ಮಂದಿ ಮಹಿಳೆಯರಿದ್ದರು’ ಎಂದರು. ‘ಈ ಐವರು ಮಹಿಳೆಯರು ಒಡಿಶಾದವರು. ಮೃತದೇಹಗಳನ್ನು ವಾಪಸು ತರಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ’ ಎಂದು ಒಡಿಶಾದ ಕಾರ್ಮಿಕ ಸಚಿವ ಗಣೇಶ್‌ ರಾಮ್‌ ಸಿಂಹಖುಟಿಯಾ ಸೋಮವಾರ ಹೇಳಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *