ಬಸವಕಲ್ಯಾಣ: ನಗರದ ಸಸ್ತಾಪುರ ರಸ್ತೆಯಲ್ಲಿನ 108 ಅಡಿ ಎತ್ತರದ ಬಸವಣ್ಣನವರ ಬೃಹತ್ ಪುತ್ಥಳಿಯ ಎದುರಲ್ಲಿನ ಬಸವ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದಿಂದ ಮೂರು ದಿನ ಹಮ್ಮಿಕೊಂಡಿರುವ 23ನೇ ಕಲ್ಯಾಣ ಪರ್ವಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಅಕ್ಟೋಬರ್ 18ರಿಂದ ಮೂರು ದಿನಗಳವರೆಗೆ ವಿವಿಧ ಗೋಷ್ಠಿ ಹಾಗೂ ಇತರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ.
ಇದಕ್ಕಾಗಿ ಇಲ್ಲಿ ಬೃಹತ್ ಸಭಾ ಮಂಟಪ ನಿರ್ಮಿಸಿದ್ದು ವೇದಿಕೆ ಸಿದ್ಧಪಡಿಸಲಾಗಿದೆ. ಮಂಟಪಕ್ಕೆ ಆಕರ್ಷಕ ಮಹಾದ್ವಾರ ನಿರ್ಮಿಸಲಾಗಿದೆ. ಆವರಣದ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ಕಟ್ಟಲಾಗಿದೆ. ಬಸವಣ್ಣನವರ ಪುತ್ಥಳಿಗೆ ರಾತ್ರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಇತರೆಡೆಯೂ ಪುಷ್ಪಗಳಿಂದ ಅಲಂಕರಿಸಲಾಗಿದೆ.
ನಗರ ಪ್ರವೇಶಿಸುವ ರಸ್ತೆಯಿಂದ ಬಸವಣ್ಣನವರ ಪುತ್ಥಳಿಯವರೆಗೆ ಹೋಗುವುದಕ್ಕೆ ಈಚೆಗೆ ಉತ್ತಮವಾದ ಹಾಗೂ ನೇರವಾದ ರಸ್ತೆ ನಿರ್ಮಿಸಿದ್ದರಿಂದಲೂ ಪರಿಸರ ಸುಂದರವಾಗಿ ಕಾಣುತ್ತಿದೆ.
ಈಗಾಗಲೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಕೆಲ ಭಕ್ತರು ಬಂದಿದ್ದಾರೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವರು ಎಂದು ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಬಸವಕಲ್ಯಾಣದ ಬಸವ ಮಹಾಮನೆ ಆವರಣದಲ್ಲಿ ಕಲ್ಯಾಣ ಪರ್ವ ನಡೆಯುವ ಸ್ಥಳದಲ್ಲಿನ ಬಸವಣ್ಣನವರ ಬೃಹತ್ ಮೂರ್ತಿರವಿ ಕೊಳಕೂರ ತಾಲ್ಲೂಕು ಅಧ್ಯಕ್ಷ ರಾಷ್ಟ್ರೀಯ ಬಸವದಳಮಾತೆ ಗಂಗಾದೇವಿಯವರ ನೇತೃತ್ವದಲ್ಲಿ ಕಲ್ಯಾಣ ಪರ್ವ ಅದ್ಧೂರಿಯಾಗಿ ನಡೆಯಲಿದ್ದು ಸಾವಿರಾರು ಜನರಿಗೆ ವಸತಿ ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

