Breaking News

13 ಕೆ.ಜೆ ಗಾಂಜಾ ವಶಕ್ಕೆ ಪಡೆದ ಪೋಲಿಸರು

ಹುಬ್ಬಳ್ಳಿ:ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಪ್ರತ್ಯೇಕ ಎರಡು ಪ್ರಕರಣದಲ್ಲಿ 13 ಕೆ.ಜೆ ಗಾಂಜಾ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಡವಾಡ ಗ್ರಾಮದಲ್ಲಿ ಆರೋಪಿತನಾದ ಹೇಮರೆಡ್ಡಿ ಯಲ್ಲಪ್ಪ ರಡ್ಡೆರ ಇತನು ತನ್ನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 12 ಹಸಿ ಗಾಂಜಾ ಗಿಡಗಳು ಒಟ್ಟು ತೂಕ 7 ಕೆ.ಜಿ. 40 ಗ್ರಾಂ ಗಾಂಜಾವನ್ನು ದಾಳಿ ಮಾಡಿ ವಶಪಡಿಸಿಕೊಂಡು ಪೊಲೀಸರು ಜಪ್ತಿ ಮಾಡಿದ್ದಾರೆ.

ಇನ್ನೂ ಶಿರಗುಪ್ಪಿ ಗ್ರಾಮದಲ್ಲಿ ಆರೋಪಿತನಾದ ಶಿವಯ್ಯ ಅಂದಾನಯ್ಯ ಮಂಟೂರ ಎಂಬಾತನು ತನ್ನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 28 ಹಸಿ ಗಾಂಜಾ ಗಿಡಗಳ ಒಟ್ಟು ತೂಕ 6 ಕೆ.ಜಿ. 785 ಗ್ರಾಂ ನ್ನು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ, ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *