ಹುಬ್ಬಳ್ಳಿ: ವಂಚನೆ ಪ್ರಕರಣದಲ್ಲಿ ಗೋಪಾಲ್ ಜೋಶಿಯನ್ನು ಬಂಧಿಸಿರುವ ಬೆಂಗಳೂರಿನ ಪೊಲೀಸರು ಪ್ರಕರಣದ ತನಿಖೆಗಾಗಿ ದೂರುದಾರೆ ಸುನೀತಾ ಚವ್ಹಾಣ ಅವರನ್ನು ಕೇಶ್ವಾಪೂರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಗೋಪಾಲ್ ಜೋಶಿ ವಿಚಾರಣೆ ನಡೆಸುತ್ತಿರುವ ಎಸಿಪಿ ಚಂದನ್ ದೂರುದಾರೆ ಸುನೀತಾ ಅವರನ್ನು ಠಾಣೆಗೆ ಕರೆಯಿಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಗೋಪಾಲ ಜೋಶಿಯವರ ಮನೆಯಲ್ಲಿ ತಪಾಸಣೆ ನಡೆಸಿದ ಬಳಿಕ ನೇರವಾಗಿ ಕೇಶ್ವಾಪೂರ ಠಾಣೆಗೆ ಆಗಮಿಸಿದ ಬೆಂಗಳೂರು ಪೊಲೀಸರ ತಂಡ ತೀವ್ರ ವಿಚಾರಣೆ ನಡೆಸಿದೆ.
ಇನ್ನೂ ಕೇಶ್ವಾಪುರ ಪೊಲೀಸ್ ಠಾಣೆಗೆ ಆಗಮಿಸಿದ ಸುನೀತಾ ಚವ್ಹಾಣ ಅವರಿಂದ ತನಿಖೆಗೆ ಸೂಕ್ತ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದು, ಮಾಧ್ಯಮದ ಮುಂದೆ ಸುನೀತಾ ಚವ್ಹಾಣ ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪಾತ್ರವಿಲ್ಲ ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

