ಕುಂದಗೋಳ : ದೀಪಾವಳಿ ಹಬ್ಬಕ್ಕೆ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವ ಕಡು ಬಡವರಿಗೆ ಉಚಿತ ಕಲರ್ ಟಿವಿಯನ್ನು ವಿತರಣೆ ಮಾಡುವಂತೆ ಕಾಂಗ್ರೆಸ್ ಮುಖಂಡ ಮಂಜುನಾಥ ಎಂಟೂವಿ ಅವರು ಗ್ರೇಡ್-2 ತಹಶೀಲ್ದಾರ್ ಹೆಚ್.ಭಜಂತ್ರಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಹಳ್ಳಿಗಳಲ್ಲಿ ಇಂದಿಗೂ ಕಡು ಬಡವರು ತಮ್ಮ ಮನೆಗಳಲ್ಲಿ ಟಿವಿಯನ್ನು ಹೊಂದಿಲ್ಲದೆ ಎಷ್ಟೋ ಕುಟುಂಬಗಳು ಇವೆ, ಇಂತಹ ಕುಟುಂಬಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಇಂತಹ ಬಿಪಿಎಲ್ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಟಿವಿಯನ್ನ ಸರ್ಕಾರ ವಿತರಿಸಿದಲ್ಲಿ ಕುಟುಂಬಕ್ಕೆ ಟಿವಿ ಕೇವಲ ಮನರಂಜನೆ ಮಾನದಂಡವಾಗದೆ, ರಾಜ್ಯದ ವಿದ್ಯಮಾನಗಳು, ಸರ್ಕಾರದ ಯೋಜನೆಗಳು ತಲುಪಲು ಸಹಾಯಕವಾಗುತ್ತದೆ ಎಂದು ಮನವಿ ಸಲ್ಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

