Breaking News

ಇಂಜನಿಯರಿಂಗ್ ಪದವಿಗೆ ಕಡಿಮೆಯಾದ ಬೇಡಿಕೆ: ರಾಜ್ಯಾದ್ಯಂತ 13 ಸಾವಿರಕ್ಕೂ ಅಧಿಕ ಸೀಟುಗಳು ಖಾಲಿ

ಬೆಂಗಳೂರು: ಬಹಳ ಬೇಡಿಕೆಯಲ್ಲಿದ್ದ ಇಂಜಿನಿಯರಿಂಗ್ ಪದವಿ ಯಾರಿಗೂ ಬೇಡವಾಗಿದ್ದು, ದಶಕಗಳ ಹಿಂದಿನಿಂದಲೂ ಲಕ್ಷ ರೂಪಾಯಿ ಹಣ ನೀಡಿದರೂ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟುಗಳು ಸಿಗುತ್ತಿರಲಿಲ್ಲ. ಆದರೆ, ಇದೀಗ ರಾಜ್ಯದಲ್ಲಿ 13 ಸಾವಿರಕ್ಕೂ ಅಧಿಕ ಸೀಟುಗಳು ಖಾಲಿ ಉಳಿದಿರುವುದು ತಿಳಿದುಬಂದಿದೆ.
ರಾಜ್ಯ ಸರಕಾರವು ಇಂಜಿನಿಯರಿಂಗ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಖಾಸಗಿ ಕಾಲೇಜುಗಳ ಶೇ.30, ಸರಕಾರಿ ಕಾಲೇಜುಗಳ ಶೇ.25ರಷ್ಟು ಸೀಟುಗಳು ಹಂಚಿಕೆಯಾಗದೇ ಹಾಗೆ ಉಳಿದಿದೆ. ಈ ನಡುವೆ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹಾಕುತ್ತಿರುವುದು ಸೀಟುಗಳ ಭರ್ತಿಯಾಗದೇ ಉಳಿಯುತ್ತಿವೆ ಎಂದು ಕೆಲ ವಿದ್ಯಾರ್ಥಿ ಸಂಘಟನೆಗಳು ಆರೋಪಿಸುತ್ತಿವೆ.
ಪ್ರಸಕ್ತ ವರ್ಷ ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿ ಸಲಾಗಿದೆ. ಹಂಚಿಕೆಯಾಗದೇ ಉಳಿದ ಸೀಟುಗಳಲ್ಲಿ ಸಿವಿಲ್, ಇಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್ ವಿಭಾಗ ಮೊದಲ ಮೂರು ಸ್ಥಾನದಲ್ಲಿದೆ. ಕಂಪ್ಯೂಟರ್ ಸೈನ್ಸ್ ಮತ್ತು ಇಲೆಕ್ಟ್ರಿಕಲ್ ವಿಭಾಗವು ಬೇಡಿಕೆಯನ್ನು ಉಳಿಸಿಕೊಂಡಿವೆ.
ರಾಜ್ಯದಲ್ಲಿ ಇಂಜಿನಿಯರಿಂಗ್ ಪದವಿಯ ಎಲ್ಲ ವಿಭಾಗದಲ್ಲಿ ಒಟ್ಟು 79,907 ಸೀಟುಗಳಿದ್ದು, ಈ ಪೈಕಿ 66,818 ಸೀಟುಗಳು ಮಾತ್ರ ಭರ್ತಿಯಾಗಿದ್ದು, 13,089 ಭರ್ತಿಯಾಗದೆ ಬಾಕಿ ಉಳಿದುಕೊಂಡಿವೆ. ಸಿವಿಲ್, ಮೆಕಾನಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಸೀಟುಗಳು ಹಂಚಿಕೆಯಾಗದೇ ಉಳಿದಿವೆ.
ಸಿವಿಲ್ ವಿಭಾಗದಲ್ಲಿ ಒಟ್ಟು 5,723 ಸೀಟುಗಳಿದ್ದು, ಪೈಕಿ 2,500ಕ್ಕೂ ಅಧಿಕ ಸೀಟು ಹಂಚಿಕೆಯಾಗದೆ, ಬಾಕಿ ಉಳಿದಿವೆ. ಮೆಕಾನಿಕಲ್ ವಿಭಾಗದಲ್ಲಿ 5,977 ಸೀಟುಗಳ ಪೈಕಿ 3 ಸಾವಿರಕ್ಕೂ ಅಧಿಕ ಸೀಟುಗಳನ್ನು ಯಾರೂ ತೆಗೆದುಕೊಳ್ಳದೇ ಇರುವುದು ತಿಳಿದು ಬಂದಿದೆ. ಆದರೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಒಟ್ಟು 18,794 ಸೀಟುಗಳು ಇದ್ದು, ಅದರಲ್ಲಿ ಸುಮಾರು 18,200 ಸೀಟುಗಳವರೆಗೆ ಹಂಚಿಕೆಯಾಗಿವೆ ಇಲ್ಲೂ 500ಕ್ಕೂ ಅಧಿಕ ಸೀಟುಗಳನ್ನು ಯಾರೂ ತೆಗೆದುಕೊಂಡಿಲ್ಲ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *