Breaking News

ಕೇಂದ್ರದ ಶಿಕ್ಷಣ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಆಯ್ಕೆ

ದಾವಣಗೆರೆ: ಕೇಂದ್ರ ಸರಕಾರವು ಶಿಕ್ಷಣ ಸಚಿವಾಲಯಕ್ಕಾಗಿ ಸಲಹಾ ಸಮಿತಿಯನ್ನು ರಚನೆ ಮಾಡಿದ್ದು, ಈ ಸಮಿತಿಗೆ ಸದಸ್ಯರಾಗಿ ಕರ್ನಾಟಕದಿಂದ ಲೋಕಸಭಾ ಸದಸ್ಯರ ಪೈಕಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ನೇಮಕ ಮಾಡಲಾಗಿದೆ.
ಸಮಿತಿಗೆ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್, ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರಾದ ಜಯಂತ್ ಚೌಧರಿ ಹಾಗೂ ಕೌಶಲ್ಯ ಅಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವರಾದ ಮಜುಂದಾರ್ ಅವರುಗಳು ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯಲ್ಲಿ 8 ಲೋಕಸಭಾ ಸದಸ್ಯರು ಹಾಗೂ ಎಂಟು ರಾಜ್ಯ ಸಭಾ ಸದಸ್ಯರು ನೇಮಕಗೊಂಡಿದ್ದಾರೆ ಹಾಗೂ ಇಬ್ಬರು ಪದನಿಮಿತ್ತ ಸದಸ್ಯರುಗಳಿದ್ದಾರೆ. ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಆರೋಗ್ಯ ಸಮಿತಿಯ ಜತೆಯಲ್ಲಿ ಶಿಕ್ಷಣ ಸಮಿತಿಗೂ ಸದಸ್ಯರಾಗಿರುವುದು ವಿಶೇಷವಾಗಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *