ಬೆಳಗಾವಿ: ಸರ್ಕಾರಿ ಗೋಮಾಳ ಜಾಗಕ್ಕಾಗಿ ನಡೆದ ಘರ್ಷಣೆ ವೇಳೆ ಸವರ್ಣೀಯ ಕುಟುಂಬದ ಸದಸ್ಯರು ದಲಿತ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ನಡೆದಿದೆ.
ಮುಗಳಖೋಡ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಜಗಳವಿತ್ತು.
ಗೋಮಾಳ ಜಾಗದಲ್ಲಿ ಶೆಡ್ ಹಾಕಿಕೊಂಡಿದ್ದ ಮಹಾದೇವ ಮಾದರ್ ಕುಟುಂಬ ಸುಮಾರು 12 ಗುಂಟೆ ಗೋಮಾಳ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿತ್ತು. ಈ ಗುಡಿಸಲುಗಳಿಗೆ ಮಹಾವೀರ ಕುರಾಡೆ ಕುಟುಂಬದವರು ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಬಹಳ ದಿನಗಳಿಂದಲೂ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ತಡರಾತ್ರಿ ಬೆಂಕಿ ಇಟ್ಟಿರುವ ಘಟನೆ ನಡೆದಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

