Breaking News

ನಮ್ಮ ಧಾರವಾಡ ಜಿಲ್ಲೆಯಲ್ಲೇ 500 ಎಕರೆ ಆಸ್ತಿ ವಕ್ಷಗೆ ಒಳಪಟ್ಟಿದೆ: ಅರವಿಂದ ಬೆಲ್ಲದ

ಧಾರವಾಡ: ಇಡೀ ರಾಜ್ಯದ ಜನತೆಗೆ ಆಘಾತ ಕೊಡುವ ಬೆಳವಣಿಗೆಯೊಂದು ನಡೆಯುತ್ತಿದೆ. ನಮ್ಮ ಧಾರವಾಡ ಜಿಲ್ಲೆಯಲ್ಲೇ 500 ಎಕರೆ ಆಸ್ತಿ ವಕ್ಷಗೆ ಒಳಪಟ್ಟಿದೆ ಎಂಬ ಮಾಹಿತಿ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಉಪ್ಪಿನ ಬೆಟಗೇರಿ ಗ್ರಾಮದ ಕೆಲ ರೈತರ ಜಮೀನಿನ ಪಹಣಿಯಲ್ಲೂ ವಕ್ಷ ಆಸ್ತಿ ಎಂದು ನಮೂದಾಗಿದೆ. ಧಾರವಾಡದ ಸ್ಮಶಾನ ಕೂಡ 1995 ರಲ್ಲಿ ವಕ್ಷ ಆ್ಯಕ್ಟ್ ಮಾಡಿದ್ದ ವೇಳೆ ಅದನ್ನು ವಕ್ಷ ಆಸ್ತಿ ಮಾಡಿಕೊಳ್ಳಲಾಗಿದೆ. ಅಲ್ಲಿ ಎಸ್‌ಸಿ, ಎಸ್‌ಟಿ ಅವರಿಗೆ ಜಾಗ ಕೂಡ ಕಡಿಮೆಯಾಗಿದೆ ಎಂದರು.

ಆಳಂದದಲ್ಲಿ ಕುರುಬ ಸಮಾಜದ ಬೀರೇಶ್ವರ ದೇವಸ್ಥಾನ ವಕ್ಷ ಆಸ್ತಿಗೆ ಸೇರಿದೆ ಎಂದು ಬರೆದುಕೊಂಡಿದ್ದಾರೆ. ಸಿದ್ದರಾಮಯ್ಯನವರು ಕುರುಬ ಸಮಾಜದವರೇ ಆಗಿದ್ದು, ಅವರು ಇದಕ್ಕೆ ಉತ್ತರ ಕೊಡಬೇಕು. ಕೇವಲ ಮುಸ್ಲಿಂ ಸಮಾಜಕ್ಕೆ ಬದ್ಧತೆ ತೋರಿಸಿದರೆ ನಡೆಯುವುದಿಲ್ಲ. ಸಿದ್ದರಾಮಯ್ಯ ಹಾಲುಮತದವರು ಅವರ ಸಮಾಜದ ದೇವರ ಜಾಗವನ್ನೇ ವಕ್ಷಗೆ ಸೇರಿಸಿದ್ದಾರೆ. ಇದರ ಬಗ್ಗೆ ಜನ ಜಾಗೃತಿ ಆಗುವ ಅವಶ್ಯಕತೆ ಇದೆ. ಇದು ಆಗಲಿಲ್ಲ ಎಂದರೆ ಭೂಮಿ ಹೊಡೆಯುವ ಕೆಲಸ ಆಗಲಿದೆ ಎಂದರು.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *