Breaking News

ಇಸ್ರೇಲ್ ನಿಂದ ಲೆಬನಾನ್ ಮೇಲೆ ವೈಮಾನಿಕ ದಾಳಿ: 40 ಕ್ಕೂ ಹೆಚ್ಚು ಜನರ ಸಾವು, 53 ಜನ ಗಂಭೀರ ಗಾಯ

ಲೆಬನಾನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಇನ್ನೂ ಮುಂದುವರೆದಿದ್ದು, ಇಸ್ರೇಲ್ ಮತ್ತೊಮ್ಮೆ ಲೆಬನಾನ್ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಬೆಕಾ ಕಣಿವೆಯಲ್ಲಿ ಬಾಲ್ಬೆಕ್ ನಗರದ ಅಪಾರ್ಟ್ ಮೆಂಟ್ ವೊಂದನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಲಾಗಿದ್ದು, ಈ ವೈಮಾನಿಕ ದಾಳಿಯಲ್ಲಿ 40 ಜನರು ಸಾವನ್ನಪ್ಪಿದ್ದಾರೆ ಮತ್ತು 53 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಸತ್ತವರಲ್ಲಿ ಆರು ವೈದ್ಯರು ಇದ್ದಾರೆ ಎಂದು ತೋರುತ್ತದೆ ಈ ದಾಳಿಯಲ್ಲಿ ಇಡೀ ಕಟ್ಟಡ ಧ್ವಂಸಗೊಂಡಿದ್ದು, ಈ ದಾಳಿಯಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಕೆಲವು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇಸ್ರೇಲ್ ಅಧಿಕೃತವಾಗಿ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ ಮತ್ತೊಂದೆಡೆ, ಬೆನ್ ಗುರಿಯಾನ್ ವಿಮಾನ ನಿಲ್ದಾಣದ ಬಳಿ ಇಸ್ರೇಲಿ ಮಿಲಿಟರಿ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಹೆಜ್ಬೊಲ್ಲಾ ಘೋಷಿಸಿತು.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *