Breaking News

17 ಜನ ಎಂಎಲ್‌ಎಗಳನ್ನ ಕೊಂಡುಕೊಂಡರಲ್ಲ ಆ ಹಣ ಎಲ್ಲಿಂದ ಬಂತು..? : ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ಕರ್ನಾಟಕದಲ್ಲಿ 700 ಕೋಟಿ ಅಕ್ರಮ ಹಣದಿಂದ ಕಾಂಗ್ರೆಸ್‌ ಚುನಾವಣೆ ಮಾಡುತ್ತಿದೆ ಎಂಬ ಪ್ರಧಾನಿ ಮೋದಿಯವರ ಆರೋಪ ವಿಚಾರ, ಒಬ್ಬ ಪ್ರಧಾನಿ ಆದವರು ಈ ರೀತಿ ಹೇಳಿಕೆ ನೀಡೋದು ಅವರ ಸ್ಥಾನಕ್ಕೆ ಅಗೌರವ ತರುವಂತದ್ದು. ಯಾರಾದರೂ ಅಬಕಾರಿಯಲ್ಲಿ 700 ಕೋಟಿ ಮಾಡೋಕಾಗುತ್ತಾ..? ಎಂದು ಸಿಎಂ ಸಿದ್ದರಾಮಯ್ಯ ಮರು ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯವರು ನಮಗೆ ಯಾಕೆ ಹಣ ಕೊಡ್ತಾರೆ..? ಒಬ್ಬ ಪ್ರಧಾನಮಂತ್ರಿ ಸುಳ್ಳು ಹೇಳಬೇಕಾದ್ರೆ ಇತಿಮಿತಿ ಇರಬೇಕು. ಬಿಜೆಪಿಯವರು ರಾಜಕೀಯಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. 17 ಜನ ಎಂಎಲ್‌ಎಗಳನ್ನ ಕೊಂಡುಕೊಂಡರಲ್ಲ ಆ ಹಣ ಎಲ್ಲಿಂದ ಬಂತು..? ಸಿಎಂ ಆಗಬೇಕಾದ್ರೆ 2 ಸಾವಿರ ಕೋಟಿ ಕೊಡಬೇಕು ಅಂತಾ ಯತ್ನಾಳ್ ಅವರೇ ಹೇಳಿದ್ರು. ಅದು ಯಾವ ಹಣ..? ಇದು ನಾನು ಹೇಳಿರೋದಲ್ಲ ಬಿಜೆಪಿಯ ಯತ್ನಾಳ್ ಅವರೇ ಹೇಳಿದ್ದು.

ಯಡಿಯೂರಪ್ಪ, ಬೊಮ್ಮಾಯಿ 2000 ಕೋಟಿ ಕೊಟ್ಟು ಸಿಎಂ ಆಗಿದ್ರು ಅಂತಾ ಯತ್ನಾಳ್ ಅವರೇ ಹೇಳಿದ್ರು. ಆ ಹಣ ಎಲ್ಲಿಂದ ಓಡಿ ಬಂತು. ಬಿಜೆಪಿ ನಾಯಕರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ. ತಿರುಗೇಟು ಕೊಟ್ಟಿದ್ದಾರೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *