Breaking News

50 ಕೋಟಿ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ

ಹುಬ್ಬಳ್ಳಿ: 50 ಕೋಟಿ ಆರೋಪದ ವಿಚಾರ, ಹುಚ್ಚು ಹುಚ್ಚರ ತರಹ ಮಾತಾಡೋದು ಪ್ರಜಾಪ್ರಭುತ್ವದ ಮೇಲೆ ಪ್ರಭಾವ ಬೀರುತ್ತೆ. 50 ಜನರಿಗೆ 50 ಕೋಟಿ ಅಂದ್ರೆ 2500 ಕೋಟಿ ಆಗುತ್ತೆ. ಏನು ಮಾತಾಡ್ತೀರಿ ಅನ್ನೋ ಸೆನ್ಸ್ ಇದೆಯಾ ನಿಮಗೆ? 50 ಕೋಟಿ ಕೊಡ್ತಾರೆ ಅನ್ನೋ ಆರೋಪ ಮಾಡ್ತೀರಿ. ನಿಮ್ಮವರು ವ್ಯಾಪಾರ ಆಗೋಕೆ ತಯಾರಾಗಿದ್ದಾರಾ? ನಿಮ್ಮ ಶಾಸಕರು ಕತ್ತೆ ಕುರಿ ಕೋಣನಾ? ನಾನು ಹಾಗೆ ಭಾವಿಸಿಲ್ಲ. ಕತ್ತೆ ಕುರಿ ಮಾರಾಟ ಮಾಡ್ತಾರೆ. ಸಿಎಮ್ ಆದವರು ಬಹಳ ಜವಾಬ್ದಾರಿಯಿಂದ ಮಾತಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಬ್ಬ ಶಾಸಕನಾದರೂ ಇಂತವರು ದುಡ್ಡು ಕೊಡೋಕೆ ಬಂದಿದ್ರು ಅಂತಾ ಹೇಳಲಿ. ಇದು ಅಟ್ಟರ್ ನಾನ್ ಸೆನ್ಸ್, ಇದು ಶುದ್ಧ ಹುಚ್ಚುತನ. ಸಾರ್ವಜನಿಕ ಬದುಕು ಕಲುಷಿತ ಆಗೋ ಹಾಗೆ ಮುಖ್ಯಮಂತ್ರಿ ಆದವರು ಮಾಡಬಾರದು.

ಸಿಎಂ ಹಗರಣದಲ್ಲಿ ಸಿಲುಕಿದ್ದಾರೆ. ಸಿಎಂ ಮೇಲೆ ಸಿಕ್ಕಾಪಟ್ಟೆ ಆರೋಪ ಇದೆ. ಹೀಗಾಗಿ ಡೈವರ್ಟ್ ಮಾಡುತ್ತಿದ್ದಾರೆ.ಯಾರು ಆಫರ್ ಮಾಡಿದ್ರು? ಯಾರಿಗೆ ಮಾಡಿದರು ಅಂತ ಬೇಕಲ್ಲ? ಎಂದು ಪ್ರಹ್ಲಾದ ಜೋಶಿ ಕುಟುಕಿದರು.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *