ಹುಬ್ಬಳ್ಳಿ: ರಾಜ್ಯ ಸರ್ಕಾರ ದಿವಾಳಿಯಾಗ್ತಿರುವುದರಿಂದ ಪಡಿತರ ಕಾರ್ಡ್ ಕಡಿತ ಮಾಡುತ್ತಿದೆ. ರಾಜ್ಯ ಸರ್ಕಾರ ದಿಢೀರ್ ಆಗಿ ಬಿಪಿಎಲ್ ಕಾರ್ಡ್ ಯಾಕೆ ಕಡಿತ ಮಾಡುತ್ತಿದೆಯೋ ಗೊತ್ತಿಲ್ಲ. ಸಚಿವ ಮುನಿಯಪ್ಪ ಅವರ ಜೊತೆ ಮಾತಾಡುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 2013ರ ಕಾಯ್ದೆ ಪ್ರಕಾರ ನೇಮಗಳನ್ನು ಜಾರಿಗೆ ತಂದಿದ್ದೇವೆ. 5 ಕೆಜಿ ಧಾನ್ಯವನ್ನು ಸಂಪೂರ್ಣ ಉಚಿತವಾಗಿ ಕೊಡುತ್ತಿದ್ದೇವೆ. ಕನಿಷ್ಠ ಬೆಂಬಲ ಬೆಲೆಯಡಿ ಗೋಧಿ, ಭತ್ತ ಇತ್ಯಾದಿಗಳನ್ನು ಖರೀದಿಸುತ್ತಿದ್ದೇವೆ. ಜೊತೆಗೆ ದರ ಕುಸಿತವಾಗುವ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದ್ದೇವೆ. ಇಷ್ಟೆಲ್ಲ ಕೇಂದ್ರ ಸರ್ಕಾರ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಕಾರ್ಡ್ ಯಾಕೆ ಕಡಿತ ಮಾಡ್ತಿದೆಯೋ ಗೊತ್ತಿಲ್ಲ. ಬಡವರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಪ್ಲಾನಿಂಗ್ ಇರಲಾರದೆ ಗ್ಯಾರಂಟಿ ಘೋಷಿಸಿರೋದೆ ಇಷ್ಟೆಲ್ಲಕ್ಕೂ ಕಾರಣ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದೇವೆ ಅಂತಾರೆ. ಆದ್ರೆ ಒಂದೂ ಗ್ಯಾರಂಟಿಯನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಕೊಡಲು ಆಗದ, ಬಿಡಲೂ ಆಗದ ಸ್ಥಿತಿ ಸರ್ಕಾರದ್ದು. ಹಲವು ಯೋಜನೆ ಬಂದ್ ಮಾಡಿವೆ. ಬಹುತೇಕ ಎಲ್ಲ ಗ್ಯಾರಂಟಿಗಳು ಅರ್ಧಕ್ಕೆ ನಿಂತಿವೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯತ್ತ ಮುಖ ಮಾಡಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

