Breaking News

ತನ್ನ ತಂದೆಯನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಪಾಪಿ ಮಗ

ನವಲಗುಂದ: ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಲೆಮೊರಬದಲ್ಲಿ ನ.13ರಂದು ಮನೆ ಪಕ್ಕದ ಶೆಡ್‌ನಲ್ಲಿ ಮಲಗಿದ್ದಾಗ ಅನುಮಾನಾಸ್ಪದ ಕೊಲೆ ನಡೆದಿದ್ದು ಬೆಳಕಿಗೆ ಬಂದಿತ್ತು.

ಅಡಿವೆಪ್ಪ ತಡಕೋಡ(58) ಕೊಲೆಯಾಗಿದ್ದ ವ್ಯಕ್ತಿ. ಯಾರೋ ಕಲ್ಲು ಎತ್ತಿ ಹಾಕಿ ಕೊಂದಿದ್ದ ಶಂಕೆ ವ್ಯಕ್ತವಾದ ಹಿನ್ನಲೆ ಪೊಲೀಸ್‌ ತನಿಖೆ ನಡೆಸಿ ಸತ್ಯ ಬಯಲು ಮಾಡಿದ್ದಾರೆ. ಅಡಿವೆಪ್ಪನ ಹಿರಿಯ ಮಗ ಶಿವಯೋಗಿ ತಡಕೋಡ(30)ನನ್ನು ಬಂಧಿಸಿ ವಿಚಾರಿಸಿದಾಗ ತನ್ನ ತಂದೆಯನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶಿವಯೋಗಿ ಅನೈತಿಕ ಸಂಬಂಧ ವಿರೋಧಿಸಿದ್ದ ತಂದೆ ಅಡಿವೆಪ್ಪ ಅನೈತಿಕ ಸಂಬಂಧದಲ್ಲಿ ಮುಳುಗಿ ಹೋಗಿದ್ದ ಮಗನ ಮದುವೆಗೆ ತಯಾರಿ ನಡೆಸಿದ್ದ ಅಡಿವೆಪ್ಪ ಹೆಣ್ಣು ನೋಡೊಕೆ ಹೊರಟಿದ್ದ ಹಿಂದಿನ ದಿನವೇ ಕೊಲೆಯಾಗಿದ್ದಾನೆ. ಅನೈತಿಕ ಸಂಬಂಧಕ್ಕೆ ತಂದೆ ಅಡ್ಡಿಯಾಗುತ್ತಾನೆಂದು ಕೊಲೆ ಮಾಡಿದ ಶಿವಯೋಗಿ.

ನವಲಗುಂದ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *