Breaking News

ಪಿಎಂ ಕಿಸಾನ್ ಸಮ್ಮಾನ್: ಫಲಾನುಭವಿಗಳ ಸಂಖ್ಯೆ 6 ಲಕ್ಷ ಕುಸಿತ

ನವದೆಹಲಿ: ಕರ್ನಾಟಕದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯ (ಪಿಎಂ-ಕಿಸಾನ್‌) ಫಲಾನುಭವಿಗಳ ಸಂಖ್ಯೆ ಐದು ಲಕ್ಷದಿಂದ ಆರು ಲಕ್ಷದಷ್ಟು ಕುಸಿತವಾಗಿದೆ.
ಲೋಕಸಭೆಯಲ್ಲಿ ಮೈಸೂರು ಸಂಸದ ಯದುವೀರ್ ಒಡೆಯರ್‌ ಮಂಗಳವಾರ ಕೇಳಿದ ಪ್ರಶ್ನೆಗೆ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್‌ ಠಾಕೂರ್‌ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
13ನೇ ಕಂತಿನವರೆಗೆ (2023ರ ಮಾರ್ಚ್) ರಾಜ್ಯದ ಫಲಾನುಭವಿಗಳ ಸಂಖ್ಯೆ 49 ಲಕ್ಷದಷ್ಟು ಇತ್ತು. 14ನೇ ಕಂತಿನಲ್ಲೂ ಫಲಾನುಭವಿಗಳ ಸಂಖ್ಯೆ 49.34 ಲಕ್ಷ ಆಗಿತ್ತು. 15ನೇ ಕಂತಿನಲ್ಲಿ ಈ ಸಂಖ್ಯೆ 43.78 ಲಕ್ಷಕ್ಕೆ ಕುಸಿಯಿತು. ಆ ಬಳಿಕ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿಲ್ಲ.
ಪಿಎಂ- ಕಿಸಾನ್‌ ಯೋಜನೆಯಡಿ ಕೃಷಿಕರಿಗೆ ವಾರ್ಷಿಕ ₹6 ಸಾವಿರ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಈ ಮೊತ್ತವನ್ನು ₹8 ಸಾವಿರ ಅಥವಾ ₹12 ಸಾವಿರಕ್ಕೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *