ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಪಕ್ಷ ಬಿಜೆಪಿ ನಾಯಕರು ವಕ್ಫ್ ಬೋರ್ಡ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಸರ್ಕಾರದ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಉತ್ತರ ನೀಡಲು ಮುಂದಾದಾಗ ಸದನದಲ್ಲಿ ಗದ್ದಲ ಸೃಷ್ಟಿಯಾಯ್ತು.
ಈ ವೇಳೆ ಸಿಎಂ ಸಿದ್ದರಾಮಯ್ಯ ಮದ್ಯ ಪ್ರವೇಶಿಸಿ ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಕ್ಫ್ ಬೋರ್ಡ್ ನಿಂದ ದೇವಸ್ಥಾನಕ್ಕೆ ನೋಟಿಸ್ ಕೊಟ್ಟಿದ್ದರೆ ಆ ರೀತಿಯ ನೋಟೀಸ್ ಗಳನ್ನು ವಾಪಸ್ಸು ತಗೊಳ್ತೇವೆ ಮತ್ತು ಒಂದು ವೇಳೆ ದೇವಸ್ಥಾನ ವಕ್ಪ್ ಆಸ್ತಿಯಲ್ಲಿದ್ರು ಕೂಡ ಆ ಆಸ್ತಿಯನ್ನು ಹಿಂತೆಗೆದುಕೊಳ್ಳಲ್ಲ ಎಂದಿದ್ದಾರೆ.
ಕೇವಲ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾತ್ರವಲ್ಲ, ಎಲ್ಲಾ ಕಾಲದಲ್ಲೂ ಕೂಡ ಈ ರೀತಿ ನೋಟಿಸ್ ನೀಡಲಾಗಿದೆ.ಈ ಹಿಂದೆ ಸ್ವತಃ ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ವಕ್ಪ್ ಆಸ್ತಿ ಕಬಳಿಕೆ ಮಾಡಿದ್ರೆ ಸರಿಪಡಿಸುವ ಭರವಸೆಯನ್ನು ನೀಡಿತ್ತು ಎಂದು ತಿವಿದಿದ್ದಾರೆ. ಇದರ ಜೊತೆಗೆ ರೈತರಿಗೆ ತೊಂದರೆ ಆಗುವಂತೆ ಒಕ್ಕಲೆಬ್ಬಿಸುವ ಯಾವುದೇ ಕೆಲಸ ಮಾಡಲ್ಲ. ಯಾವ ಜಾಗ ರೈತರ ಹಾಗೂ ದೇವಸ್ಥಾನದ ಆಸ್ತಿಯಾಗಿರುವುದಿಲ್ಲ ಆ ಸ್ಥಳಗಳ ಮೇಲೆ ವಕ್ಫ್ ಹಕ್ಕು ಸಾಧಿಸಲಿದೆ ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

