Breaking News

ಸಿ.ಟಿ.ರವಿ ಕೊಟ್ಟ ದೂರು ದಾಖಲಿಸಿಕೊಳ್ಳದ ಪೊಲೀಸರು: ಕಮಿಷನರ್ ವಿರುದ್ಧ ಕೇಂದ್ರ ಸಚಿವ ಜೋಶಿ ಆಕ್ರೋಶ

ಹುಬ್ಬಳ್ಳಿ: ತಮ್ಮನ್ನು ಕೊಲೆ ಮಾಡೋ ಸಂಚಿತ್ತೆಂದು ಸಿ.ಟಿ.ರವಿ ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ? ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಸಿಟಿ ರವಿ ಅವರನ್ನು ಪೊಲೀಸ್ ಅಧಿಕಾರಿಗಳು ನಡೆಸಿಕೊಂಡ ರೀತಿಯನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರವಾಗಿ ಖಂಡಿಸಿದರು.
ಸಿಟಿ ರವಿ ಅವರನ್ನು ಬಂಧಿಸಿ ಪೊಲೀಸರೇ ಸಿಟಿ ರವಿ ಮೇಲೆ ಹಲ್ಲೆ ಮಾಡಿದ ಆರೋಪ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಸಿಟಿ ರವಿ ಕೊಟ್ಟ ದೂರು ದಾಖಲಿಸಿಕೊಳ್ಳದ ಪೊಲೀಸರು, ಸರ್ಕಾರದ ಕೈಗೊಂಬೆಯಂತೆ ವರ್ತಿಸಿದೆ. ಸರ್ಕಾರ ಒಂದೇ ಇರಲ್ಲ, ಸರ್ಕಾರ ಬದಲಾಗುತ್ತೆ. ಬೆಳಗಾವಿ ಪೊಲೀಸ್ ಕಮಿಷನರ್ ಎಚ್ಚರಿಕೆಯಿಂದ ಇರಬೇಕು. ಓರ್ವ ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರನ್ನ ಬಂಧಿಸಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದೀರಿ. ಖಾನಾಪೂರ, ಕಬ್ಬಿನಗದ್ದೆ ಕಡೆ ಕರೆದುಕೊಂಡು ಹೋಗ್ತೀರಿ. ಸಾಲದ್ದಕ್ಕೆ ಈ ವಿಚಾರವಾಗಿ ಕಮಿಷನರ್ ಅತ್ಯಂತ ಬಾಲಿಶ ಹೇಳಿಕೆ ಕೊಟ್ಟಿದ್ದಾರೆ. ವಿಧಾನ ಸೌಧಕ್ಕೆ ನುಗ್ಗಿ ಹಲ್ಲೆ ನಡೆಸಿದವರನ್ನ ಏಕೆ ಬಂಧಿಸಿಲ್ಲ? ರಾಜಕೀಯವಾಗಿ ಹೋರಾಟ ಮಾಡಿ, ಕಾನೂನು ಹೋರಾಟ ಮಾಡಿ ಎಂದು ಸಿಟಿ ರವಿ ಅವರಿಗೆ ಸಲಹೆ ಕೊಟ್ಟಿದ್ದಾನೆ. ಮೊದಲು ಬೆಳಗಾವಿ ಕಮೀಷನರ್ ಗೆ ಕಾನೂನಿನ ಪಾಠ ಆಗಬೇಕು. ಇದಕ್ಕೆ ನಾನು ಯಾವುದೇ ಸಹಾಯ ಮಾಡಲು ಸಿದ್ದ ಎಂದರು.
ವಿಧಾನ ಸೌಧದಲ್ಲಿ ಆದ ಘಟನೆಗೆ ತರಾತುರಿಯಲ್ಲಿ ಎಫ್‌ಐಆರ್ ಮಾಡಿದ್ದಾರೆ. ಕಂಪ್ಲೆಂಟ್ ಕೊಟ್ಟವರು ಸಚಿವರ ಆಪ್ತರು. ಕೊಟ್ಟ ದೂರಿನಲ್ಲಿ ಸಚಿವೆಯ ಸಹಿಯೇ ಇರಲಿಲ್ಲ. ಸಚಿವರ ಆಪ್ತ ಸಹಾಯಕ ಸದನದ ಒಳಗಡೆ ಇದ್ರಾ ಕಮೀಷನರ್ ಗೆ ಕಾಮನ್ ಸೆನ್ಸ್ ಬೇಡ್ವಾ? ಬೆಳಗಾವಿ ಕಮಿಷನರ್ ಐಪಿಎಸ್ ಆಗಲು ಆನ್‌ಫಿಟ್. ಆಡಳಿತ ಪಕ್ಷದವರ ದೂರು ದಾಖಲಿಸಿಕೊಂಡ ಪೊಲೀಸರು, ವಿರೋಧ ಪಕ್ಷದವರ ಕೊಟ್ಟ ದೂರು ದಾಖಲಿಸಿಕೊಂಡಿಲ್ಲ ಏಕೆ? ಇದುವರೆಗೆ ದೂರು ದಾಖಲಾಗಿಲ್ಲ. ವಿಧಾನಸೌಧದೊಳಗೆ ನುಗ್ಗಿ ವಿಧಾನಪರಿಷತ್ ಸದಸ್ಯ ರವಿ ಮೇಲೆ ಹಲ್ಲೆ ಮಾಡಿದರೂ ಯಾಕೆ ಬಂಧಿಸಿಲ್ಲ? ಪೊಲೀಸ್ ಇಲಾಖೆ ಇರೋದು ಕಾಂಗ್ರೆಸ್ ಕಾರ್ಯಕರ್ತರನ್ನ, ನಾಯಕರನ್ನ ರಕ್ಷಣೆ ಮಾಡಲಾ? ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲಾ?
ಛಲವಾದಿ ನಾರಾಯಣ ಸ್ವಾಮಿ ಹರಿಜನರು ಅಂತಾ ಮಾತಾಡಿಸಿಲ್ವಾ ಕಮೀಷನರ್? ಅದೊಂದು ಸಾಂವಿಧಾನಿಕ ಹುದ್ದೆ. ಗೌರವಾನ್ವಿತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು ಅವರು. ಆದರೆ ಅವರು ಹರಿಜನರು ಅಂತಾ ಅವರನ್ನು ಮಾತನಾಡಿಸಿಲ್ವ? ಬೆಳಗಾವಿ ಪೊಲೀಸ್ ಕಮಿಷನರ್ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *