ಧನುಷ್ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ಲೋಕೇಶ್, ಆಶೀಶ್, ಗೌತಮ್, ರಾಹುಲ್, ಕುಶಲ್, ಅನೀಶ್, ನಿರೂಪ್, ನಿತಿನ್ ಹಾಗೂ ಅಂಜನ್ ಅವರೊಂದಿಗೆ ಪ್ರವಾಸಿ ತಾಣಗಳ ವೀಕ್ಷಣೆಗೆಂದು ಬೆಂಗಳೂರಿನಿಂದ ರೈಲಿನಲ್ಲಿ ಶುಕ್ರವಾರ ಉಡುಪಿಗೆ ಬಂದಿಳಿದಿದ್ದರು.ಇದು ಅಪಾಯಕಾರಿ ಸ್ಥಳ, ಆಳವಿದೆ. ಇಲ್ಲಿ ಇಳಿಯಬೇಡಿ ಎಂದು ಸ್ಥಳೀಯರು ಎಚ್ಚರಿಸಿದ್ದರು. ಆದರೂ ಇವರಲ್ಲಿ 9 ಮಂದಿ ಈಜಲು ಕಡಲಿಗಿಳಿದಿದ್ದರು.ಆಳವಾದ ಪ್ರದೇಶಕ್ಕೆ ತೆರಳಿದ್ದು, ಅಲ್ಲಿ ಮೊದಲಿಗೆ 7 ಮಂದಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದರು.ಸಂಜೆಯ ವೇಳೆಗೆ ಸ್ಥಳೀಯ ಮೀನುಗಾರರಿಗೆ ಅನೀಶ್ ಅವರ ಮೃತದೇಹ ಕೂಡ ಸಿಕ್ಕಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಯಿತು.ಪ್ರವಾಸಿಗರಿಗೆ ವಸತಿ ವ್ಯವಸ್ಥೆ ನೀಡುವ ವಸತಿ ಗೃಹದವರೇ ಬೀಚ್ ಬಗ್ಗೆ ಮುಂಜಾಗ್ರತೆ, ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಂಬಂಧಪಟ್ಟವರಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಆಗ ಮಾತ್ರ ಇಂತಹ ಅವಘಡಗಳು ತಪ್ಪುತ್ತವೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

