ಚಿಂಚೋಳಿ: ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಒಳಗೊಂಡು ನಾಲ್ವರು ಅಧಿಕಾರಿಗಳ ತಂಡ ಶುಕ್ರವಾರ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಪತ್ರಕರ್ತರು, ರೈತರು ಸೇರಿದಂತೆ ಯಾರನ್ನೂ ಒಳಗಡೆ ಬಿಡದೇ ಅಧಿಕಾರಿಗಳು, ವಕೀಲರು ಸಭೆ ನಡೆಸುತಿದ್ದಾರೆ. ಮಾಧ್ಯಮದವರಿಗೆ ಒಳಗಡೆ ಪ್ರವೇಶ ನಿರಾಕರಿಸಲಾಗಿದೆ.
ತಾಲ್ಲೂಕಿನ ವಿವಿಧ ಹಳ್ಳಿಗಳು ಹಾಗೂ ತಾಲ್ಲೂಕುಗಳಿಂದ ರೈತರನ್ನು ಕರೆಸಲಾಗಿದ್ದು, ನೂರಾರು ರೈತರು ಕಂಪನಿ ಹೊರಗಡೆ ಬಸ್ ನಿಲ್ದಾಣ, ಹೋಟೆಲ್, ಆವರಣ ಗೋಡೆ, ಗಿಡ ಮರಗಳ ನೆರಳಿನಲ್ಲಿ ಕಾಯುತ್ತಿರುವುದು ಗೋಚರಿಸಿತು. ಪೊಲೀಸರು ಕಂಪನಿ ಹೊರಗಡೆ ಕುಳಿತಿದ್ದರು.
ಮಾಧ್ಯಮದವರು ಎರಡು ದಿನಗಳಿಂದ ಕಂಪನಿ ಅಧಿಕಾರಿಗಳಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಯಾವುದೇ ಮಾಹಿತಿ ನೀಡುತ್ತಿಲ್ಲ.
ಸಿಪಿಐ ಕಪಿಲದೇವ, ಎಸ್‌ಐ ಗಂಗಮ್ಮ, ವೆಂಕಟೇಶ ನಾಯಕ, ಮಡಿವಾಳಪ್ಪ ಬಾಗೋಡಿ ನೇತೃತ್ವದಲ್ಲಿ ಬಂದೋಬಸ್ತ ಕೈಗೊಳ್ಳಲಾಗಿದೆ. ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಲಿದ್ದಾರೆ ಎಂದು ಮಾಹಿತಿಯಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

