Breaking News

ತಿರುಪತಿ ಕಾಲ್ತುಳಿತ ಗಲಾಟೆಗೆ ಸಿಎಂ, ಪೊಲೀಸ್, ಕಂದಾಯ ಅಧಿಕಾರಿಗಳೇ ಕಾರಣ: ಮಾಜಿ ಸಿಎಂ ಜಗನ್ ರೆಡ್ಡಿ ಆರೋಪ

ಆಂಧ್ರ ಪ್ರದೇಶ: ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳೇ ಕಾರಣ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಕುಪ್ಪಂ ಪ್ರವಾಸಕ್ಕಾಗಿ ಮೂರು ದಿನಗಳ ಕಾಲ ಇಡೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.
ಜನಸಂದಣಿ ನಿರ್ವಹಣೆಗೆ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಇದು ಕಾಲ್ತುಳಿತಕ್ಕೆ ಕಾರಣವಾಯಿತು” ಎಂದು ರೆಡ್ಡಿ ಆರೋಪಿಸಿದರು.
ಜನವರಿ 6, 7 ಮತ್ತು 8ರಂದು ಸಿಎಂ ನಾಯ್ಡು ಅವರ ಪ್ರವಾಸದಲ್ಲಿ ಪೊಲೀಸರು ನಿರತರಾಗಿದ್ದರಿಂದ, ಜನಸಮೂಹವನ್ನು ನಿಭಾಯಿಸಲು ಯಾರೂ ಇರಲಿಲ್ಲ. ಈ ನಿರ್ಲಕ್ಷ್ಯ ಮುಖ್ಯಮಂತ್ರಿಗೆ ದೇವರ ಬಗ್ಗೆ ಭಯ ಅಥವಾ ಭಕ್ತಿ ಇಲ್ಲ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು.
ತಿರುಮಲ ಬೆಟ್ಟದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಂ ಟಿಕೆಟ್ ಗಾಗಿ ಸಾವಿರಾರು ಮಂದಿ ಜಮಾಯಿಸಿದ್ದರು. ಅಂತೆಯೇ ತಿರುಪತಿಯ ಎಂಜಿಎಂ ಶಾಲೆಯ ಬಳಿಯ ಬೈರಾಗಿ ಪಟ್ಟೇಡದಲ್ಲಿ ಕಾಲ್ತುಳಿತದ ಸಂಭವಿಸಿ ಆರು ಭಕ್ತರು ಮೃತಪಟ್ಟು ಸುಮಾರು 40 ಮಂದಿ ಗಾಯಗೊಂಡಿದ್ದಾರೆ.
ಜನವರಿ 10 ರಿಂದ ಪ್ರಾರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಂಗೆ ದೇಶಾದ್ಯಂತ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಮಾಜಿ ಮುಖ್ಯಮಂತ್ರಿ ರೆಡ್ಡಿ ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದರು. ಟಿಡಿಪಿ ಸರ್ಕಾರವು ಮೃತರ ಸಂಬಂಧಿಕರಿಗೆ ತಲಾ 50 ಲಕ್ಷ ರೂಪಾಯಿ ಮತ್ತು ಗಾಯಗೊಂಡ ಭಕ್ತರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಪ್ರತಿ ವರ್ಷ ಲಕ್ಷಾಂತರ ಭಕ್ತರು ವೈಕುಂಠ ಏಕಾದಶಿಗೆ ಬರುತ್ತಾರೆ. ಅಂತೆಯೇ ವ್ಯವಸ್ಥೆಗಳನ್ನು ಮಾಡಬೇಕಾಗಿತ್ತು. ಆದರೆ ಈ ಬಾರಿ ಜನಸಂದಣಿ ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ಮತ್ತು ಮಾನವಶಕ್ತಿಯ ಕೊರತೆ ಇದೆ ಎಂದು ಹೇಳಿದರು.
ತಿರುಪತಿಯ ಭಗವಾನ್ ವೆಂಕಟೇಶ್ವರ ದೇವಾಲಯದ ಪಾವಿತ್ರ್ಯತೆಯನ್ನು ಕೆಳಮಟ್ಟಕ್ಕೆ ಇಳಿಸಲಾಗಿದೆ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ, ಸಮ್ಮಿಶ್ರ ನಾಯಕರು ಮತ್ತು ಟಿಟಿಡಿ ಉನ್ನತ ಅಧಿಕಾರಿಗಳು ದರ್ಶನಕ್ಕಾಗಿ ದೂರದೂರದಿಂದ ಬರುವ ಭಕ್ತರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಕಾಲ್ತುಳಿತವು ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.
ನಮ್ಮ ಅಧಿಕಾರಾವಧಿಯಲ್ಲಿ (2019-2024) ನಾವು ಇಂತಹ ಕಾರ್ಯಕ್ರಮಗಳನ್ನು ಕಾಳಜಿ ಮತ್ತು ಉತ್ಸಾಹದಿಂದ ನಡೆಸಿದ್ದೇವೆ. ಭಕ್ತರಿಗೆ ಆಹಾರ ಅಥವಾ ನೀರನ್ನು ಸಹ ನೀಡದೆ ಉದ್ಯಾನವನಗಳು ಮತ್ತು ಇತರ ಸ್ಥಳಗಳಲ್ಲಿ ತಡೆಯಲಾಗಿತ್ತು” ಎಂದು ಅವರು ಆರೋಪಿಸಿದರು.
ಘಟನೆ ಎಫ್‌ಐಆರ್ ಅನ್ನು ಸಾಮಾನ್ಯ ವಿಭಾಗಗಳ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ರೆಡ್ಡಿ ಆರೋಪಿಸಿದರು.
ಗುರುವಾರ, ನಾಯ್ಡು ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಇನ್ನೂ ಮೂವರನ್ನು ವರ್ಗಾವಣೆ ಮಾಡಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *