Breaking News

ಅಂಬಾಮಠದ ಜಾತ್ರೆ: ಕೆ ಕೆ ಆರ್ ಟಿ ಸಿ ಗೆ ₹16.35 ಲಕ್ಷ ಆದಾಯ

ಸಿಂಧನೂರು: ತಾಲ್ಲೂಕಿನ ಸೋಮಲಾಪುರ ಗ್ರಾಮದ ವ್ಯಾಪ್ತಿಯ ಸುಕ್ಷೇತ್ರ ಅಂಬಾಮಠದ ಸಿದ್ಧಪರ್ವತವಾಸಿ ಅಂಬಾದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಓಡಿಸಲಾದ ಕೆಕೆಆರ್‌ಟಿಸಿ ಬಸ್‌ಗಳ ಸಂಚಾರದಿಂದ ಸಿಂಧನೂರು ಸಾರಿಗೆ ಘಟಕಕ್ಕೆ ₹16.35 ಲಕ್ಷ ಆದಾಯ ಬಂದಿದೆ.
ಕಳೆದ ವರ್ಷ ಅಂಬಾಮಠ ಜಾತ್ರೆ ನಿಮಿತ್ತ ಬಸ್‍ಗಳ ಸಂಚಾರದಿಂದ ಸಿಂಧನೂರು ಸಾರಿಗೆ ಘಟಕಕ್ಕೆ ₹ 13.17 ಲಕ್ಷ ಆದಾಯ ಬಂದಿತ್ತು.
ಈ ಬಾರಿ ಜಾತ್ರಾ ವಿಶೇಷವಾಗಿ ಸಿಂಧನೂರು ಡಿಪೊದಿಂದ 25, ಬೇರೆ ಡಿಪೊದಿಂದ 15 ಸೇರಿ ಒಟ್ಟು 40 ಬಸ್‍ಗಳು ಭಕ್ತರ ಪ್ರಯಾಣದ ಅನುಕೂಲಕ್ಕಾಗಿ ಬಿಡಲಾಗಿತ್ತು. ಸ್ಥಳೀಯ ಬಸ್ ನಿಲ್ದಾಣ ಹಾಗೂ ಅಂಬಾಮಠದ ಸರ್ಕಾರಿ ಶಾಲಾವರಣದಲ್ಲಿ ಪೆಂಡಾಲ್ ಹಾಕಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಮಾಡಿ ಕಂಟ್ರೋಲರ್‌ಗಳನ್ನು ನೇಮಿಸಲಾಗಿದೆ ಎಂದು ಸಿಂಧನೂರು ಬಸ್ ಡಿಪೊ ವ್ಯವಸ್ಥಾಪಕ ಹೊನ್ನಪ್ಪ ಎಂ ವಿವರಿಸಿದರು.
ಜ.12 ರಿಂದ 40 ಬಸ್‍ಗಳು ಸಿಂಧನೂರು-ಅಂಬಾಮಠಕ್ಕೆ ಸಂಚರಿಸುತ್ತಿದ್ದು, ಜ.12 ರಿಂದ 19 ರವರೆಗೆ ಒಟ್ಟು ₹16.35 ಲಕ್ಷ ಆದಾಯ ಬಂದಿದೆ. ಸದ್ಯ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಆದರೂ ಅಗತ್ಯಕ್ಕೆ ತಕ್ಕಂತೆ ಬಸ್‍ಗಳ ಸಂಚಾರ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *