Breaking News

ಕಾಂಗ್ರೆಸ್ ವರ್ತನೆ ವಿರುದ್ಧ ಹಿಂದೂಗಳು ದಂಗೆ ಏಳ್ತಾರೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿ

ಹುಬ್ಬಳ್ಳಿ: ಪ್ರಯಾಗರಾಜ್ ನಲ್ಲಿ 144 ವರ್ಷಗಳ ನಂತರ ಕುಂಭ ಮೇಳ ನಡೀತಾ ಇದೆ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಹಿಂದೂಗಳ ಭಾವನೆಗೆ ಧಕ್ಕೆ ಮಾಡುವ ಕೆಲಸ ಮಾಡ್ತಾ ಇದೆ ಕಾಂಗ್ರೆಸ್​ ವರ್ತನೆ ಇದೇ ರೀತಿ ಮುಂದುವರಿದರೆ ಹಿಂದೂಗಳು ಅವರ ವಿರುದ್ಧ ದಂಗೆ ಏಳ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಆಕ್ರೋಶಗೊಂಡು ಹಿಂದೂ, ಹಿಂದೂತ್ವದ ಬಗ್ಗೆ ಕಾಂಗ್ರೆಸ್ ನವರಿಗೆ ಅಸಡ್ಡೆ ಭಾವನೆ, ಅಲ್ಪಸಂಖ್ಯಾತರ ಮತಕ್ಕಾಗಿ ಕಾಂಗ್ರೆಸ್ ನವರು ಹೀಗೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ, ಖರ್ಗೆ ಹೇಳಿಕೆ ಸರಿಯಲ್ಲ, ಮುಸ್ಲಿಮರು ಮೆಕ್ಕಾಗೆ ಹೋಗ್ತಾರೆ ಅಲ್ಲಿ ಹೋದ್ರೆ ಬಡತನ, ಪಾಪ ತೊಳೆದು ಹೋಗುತ್ತಾ..? ಇದು ಕಾಂಗ್ರೆಸ್ ನ ಪ್ರವೃತ್ತಿ, ದೇಶದಲ್ಲಿ ಈಗಾಗಲೇ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಕ್ಷಮಾಪಣೆ ಕೇಳಲೇಬೇಕು ಮೆಕ್ಕಾ, ಮದೀನಾ ಗೆ ಹೋಗುವ ವೇಳೆ ಸರ್ಕಾರ ಸೌಲಭ್ಯ ನೀಡುತ್ತೆ ಆದರೆ ಹಿಂದೂಗಳು ತಾವೇ ಖರ್ಚು ಮಾಡಿ ಹೋಗ್ತಾ ಇದ್ದಾರೆ. ಇದಕ್ಕೆ ನೀವ್ಯಾಕೆ ಅವರ ಭಾವನೆಗೆ ಧಕ್ಕೆ ತರ್ತೀರಿ ಮುಸಲ್ಮಾನ್, ಕ್ರಿಶ್ಚಿಯನ್ನರಿಗೆ ಹಲವಾರು ದೇಶಗಳಿವೆ, ಹಿಂದೂ ರಾಷ್ಟ್ರ ಅಂತ ಇದ್ರೆ ಅದು ಭಾರತ ದೇಶ ಮಾತ್ರ ಆಚರಣೆ ಮಾಡೋಕು ಬಿಡ್ತಿಲ್ಲ ಅಂದ್ರೆ ಹೇಗೆ..? ಕಾಂಗ್ರೆಸ್ ನವರು ಇದೇ ರೀತಿ ಹೇಳಿಕೆ ಕೊಡ್ತಾ ಹೋದ್ರೆ ಹಿಂದೂಗಳು ಅವರ ವಿರುದ್ಧ ದಂಗೆ ಏಳ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *