ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ನಡೆಯಲಿರುವ ಟ್ರೇಡ್ ಯೂನಿಯನ್ ಚುನಾವಣೆಗೆ ಎಸ್.ಡಬ್ಲ್ಯು.ಆರ್.ಎಂ.ಯು (ನೈಋತ್ಯ ರೈಲ್ವೆ ಮದ್ದೂರ ಯುನಿಯನ್) ಸಂಘಟನೆಯ ವತಿಯಿಂದ ಎ.ಎಂ.ಡಿಕ್ರೂಜ್ ಬಹುದೊಡ್ಡ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದರು.
ಡಿಸೆಂಬರ್ 4ರಿಂದ 6ರವರೆಗೆ ನಡೆಯಲಿರುವ ರೈಲ್ವೆ ಇಲಾಖೆಯ ಟ್ರೇಡ್ ಯೂನಿಯನ್ ಚುನಾವಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರೈಲು ಸೌಧದಲ್ಲಿ ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದರು. ಹುಬ್ಬಳ್ಳಿಯ ಕಚೇರಿಯಿಂದ ಬಹುದೊಡ್ಡ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಯ ಮೆರವಣಿಗೆ ನಡೆಸಿ ಬಳಿಕ ಎ.ಎಂ.ಡಿಕ್ರೂಜ್ ಅವರು ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

