ತಮಿಳುನಾಡು: ಸರ್ಕಾರ 48 ಕೋಟಿ ರೂಪಾಯಿಯ ಶಿಕ್ಷಣ ಸಾಲವನ್ನು ಮನ್ನಾ ಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ.
ಹೌದು ತಮಿಳುನಾಡು ಸರ್ಕಾರ ಎಸ್ ಸಿ ಹಾಗೂ ಎಸ್ ಟಿ ವಿದ್ಯಾರ್ಥಿಗಳ 48 ಕೋಟಿ ಶಿಕ್ಷಣ ಸಾಲವನ್ನು ಮನ್ನಾ ಗೊಳಿಸಲಿದೆ. ಈ ಕುರಿತು ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಬುಡಕಟ್ಟು, ಆದಿ ದ್ರಾವಿಡ, ಕ್ರಿಶ್ಚಿಯನ್ ಆದಿ ದ್ರಾವಿಡ ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಸುಮಾರು 48 ಕೋಟಿ ರೂಪಾಯಿ ಶಿಕ್ಷಣ ಸಾಲವನ್ನು ಮನ್ನಾ ಮಾಡುವುದಾಗಿ ತಮಿಳುನಾಡು ಸರ್ಕಾರ ತಿಳಿಸಿದೆ.
ತಮಿಳುನಾಡು ಸರ್ಕಾರ ಬಡ ಹಾಗೂ ನಿರ್ಗತಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಿತ್ತು ಈಗಾಗಲೇ ಈ ಯೋಜನೆಯ ಮೂಲಕ ಶಿಕ್ಷಣ ಸಾಲ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ತಮ್ಮ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆದಿದ್ದು ತಮಗೆ ಉದ್ಯೋಗ ದೊರೆತ ಮೇಲೆ ಈ ಸಾಲವನ್ನು ಮರುಪಾವತಿಸಬೇಕು ಎಂದು ಸರ್ಕಾರವು ಶಿಕ್ಷಣ ಸಾಲ ನೀಡುತ್ತದೆ.
ಆದರೆ ಇದೀಗ ಸರ್ಕಾರ ಸಾಲಮನ್ನಾಗೊಳಿಸುವುದಾಗಿ ತಿಳಿಸಿದೆ. ತಮಿಳುನಾಡಿನ ಡಿ ಎಂ ಕೆ ಸರ್ಕಾರ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಾಲ ರದ್ದು ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆಗೆ ಇಂದು ಶಿಕ್ಷಣ ಸಾಲವನ್ನು ರದ್ದು ಮಾಡುವುದಾಗಿ ತಿಳಿಸಿದೆ. ಈ ಹಿನ್ನೆಲೆ ಕೆಲವು ನಿಗದಿತ ಅವಧಿಗಳ ಆಧಾರದ ಮೇಲೆ 1972-73, 2002-03, 2003-04 ಹಾಗೂ 2009-10 ಈ ಅವಧಿಯಲ್ಲಿ ಪಡೆದ ಶಿಕ್ಷಣ ಸಾಲ ಬಾಕಿ ಉಳಿದಿದ್ದು ದಾಖಲೆಗಳು ಹಾಗೂ ಸಾಲಗಾರರ ಮಾಹಿತಿ ಗುರುತಿಸಲು ಸಾಧ್ಯವಾಗದ ಕಾರಣ 48 ಕೋಟಿ ಶಿಕ್ಷಣ ಸಾಲವನ್ನು ಸರ್ಕಾರ ಮನ್ನಾ ಮಾಡುವುದಾಗಿ ಆದೇಶ ಹೊರಡಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

