Breaking News

ಅಪ್ರಾಪ್ತ ಮಕ್ಕಳ ಕೈಯಲ್ಲಿ ವಾಹನ ಕೊಟ್ಟರೇ ಹುಷಾರ: ಡಿಸಿಪಿ ಖಡಕ್ ಎಚ್ಚರಿಕೆ

ಹುಬ್ಬಳ್ಳಿ ತಮ್ಮ ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸುತ್ತಿದ್ದಾರೆ ಎಂಬ ಕ್ರೇಜ್ ಹಾಗೂ ಮನಸ್ಥಿತಿ ಪೋಷಕರಿಂದ ಮೊದಲು ಬದಲಾಗಬೇಕು.‌ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವದು ದಂಡ ಕಟ್ಟಿಸಿಕೊಳ್ಳುವದು ಮುಖ್ಯವಲ್ಲ ಎಂದು

ಹುಬ್ಬಳ್ಳಿ-ಧಾರವಾಡ ಅಪರಾಧ ಹಾಗೂ ಸಂಚಾರಿ ವಿಭಾಗ ಡಿಸಿಪಿ ರವೀಶ್ ಸಿ ಆರ್ ಹೇಳಿದರು. ಬಿಗ್ ಟಿವಿ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಮಕ್ಕಳ ಉನ್ನತಿ ಹಾಗೂ ಅವನತಿಗೆ ಪೋಷಕರೇ ಕಾರಣರಾಗುತ್ತಿದ್ದಾರೆ. ಶೋಕಿಗಾಗಿ ಅಪ್ರಾಪ್ತರ ಕೈಗೆ ವಾಹನ ಕೊಡುವದು, ಪೋಷಕರು ಹಿಂದೆ ಕುಳಿತು

ಸವಾರಿ ಮಾಡುವಂತದ್ದು ಅಪರಾಧ. ಪೊಲೀಸ್ ಇಲಾಖೆ ಅದನ್ನು ತಡೆಗಟ್ಟುವಲ್ಲಿ ‌ಕ್ರಮ ವಹಿಸಬಹುದು. ಆದ್ರೆ ಯಾವುದೇ ಅವಘಡವಾದ್ರೆ ನೋವು ತಿನ್ನುವವರು ಹೆತ್ತತಂದೆ ತಾಯುಗಳೇ. ಡಿ ಎಲ್ ಇಲ್ಲದೆ ಮಕ್ಕಳಿಗೆ ವಾಹನ ಕೊಡುವದು ನೂರಕ್ಕೆ ನೂರು ತಪ್ಪು. ಪೋಷಕರು ಇಂತ ತಪ್ಪು ಮಾಡಬಾರದು ಎಂದರು.ಮಕ್ಕಳು ಹಾಗೂ ಪೋಷಕರಲ್ಲಿ ಜಾಗೃತಿ ‌ಮೂಡಿಸಲು

ಶಾಲಾ ‌ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಇದಲ್ಲದೇ ಸುತ್ತಮುತ್ತಲಿನ ಬಡಾವಣೆ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಪೋಷಕರನ್ನು ಸೇರಿಸಿ ಜನ ಸಂಪರ್ಕ ಸಭೆ ಮೂಲಕ ಆಗುವ ಅನಾಹುತಗಳ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ.ಸಂಚಾರ ನಿಯಮಗಳ ಬಗ್ಗೆ ಸಂಚಾರಿ ನಿಯಮ ಪಾಲನೆ ಬಗ್ಗೆ ನಿತ್ಯ ಜಾಗರೂಕತೆಯನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಒಂದು ಕೊಲೆಗೆ ಕಾರಣವಿರುತ್ತೆ‌. ಆದ್ರೆ ಸಂಚಾರಿ ವ್ಯವಸ್ಥೆಯಲ್ಲಿ ನಡೆಯುವ ಅಪಘಾತಗಳಿಗೆ ಕಾರಣ ಇರುವದಿಲ್ಲ. ಏನು ತಪ್ಪು ಮಾಡದೆ ಓರ್ವ ಅಮಾಯಕ ವ್ಯಕ್ತಿಯ ಅಪಘಾತದಲ್ಲಿ ವ್ಯಕ್ತಿ ಸಮಸ್ಯೆ ಅನುಭವಿಸುವದು ಕೊಲೆಗಿಂತಲೂ‌ ಘೋರವಾಗಿರುತ್ತದೆ.ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆಯಿಂದ ಸಾಕಷ್ಟು ‌ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪೋಷಕರು ಶೋಕಿಗಾಗಿ ವಾಹನಗಳನ್ನು ಅಪ್ರಾಪ್ತರ ‌ಕೈಗೆ ಕೊಡುವುದನ್ನು ‌ ಬಿಡಬೇಕು. ಪೋಷಕರು ಜವಾಬ್ದಾರಿಯುತವಾಗಿ ನಡೆಸಿಕೊಳ್ಳಬೇಕು‌ ಎಂದು ಸಲಹೆ ನೀಡಿದರು. ರವೀಶ್ ಸಿ‌ಆರ್, ಅಪರಾಧ ಹಾಗೂ ಸಂಚಾರ ವಿಭಾಗ ಡಿಸಿಪಿ

Share News

About Shaikh BigTv

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *