Breaking News
Featured Video Play Icon

ತಿಮ್ಮಸಾಗರ ಕಾಲೇಜ್ ಹತ್ತಿರ ಹೊಡೆದಾಟ ಪ್ರಕರಣ ದಾಖಲು: ಸಾತಣ್ಣವರ ಆ್ಯಂಡ್ ಟೀಮ್ ಕಾರ್ಯಕ್ಕೆ ಆಯುಕ್ತರ ಮೆಚ್ಚುಗೆ..

ಇತ್ತೀಚಿಗೆ ತಣ್ಣಗಾದ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಗಳ ಮಧ್ಯೆ ಇದೀಗ ಒಂದಿಷ್ಟು ಸ್ಥಳೀಯ ಯುವಕರಿಂದ ಹೊಡೆದಾಟದ ಪ್ರಕರಣವು ಬೆಳಕಿಗೆ ಬಂದಿದೆ. ಮಾರ್ಚ್ ಐದರಂದು ಸುಮಾರು ರಾತ್ರಿ 11:30ಕ್ಕೆ ತಿಮ್ಮಸಾಗರ ರೋಡ್ ಐ.ಟಿ.ಐ ಕಾಲೇಜ್ ಹತ್ತಿರ ಕಾಲೇಜು ಯುವಕರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣವು

ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಂಟು ಜನ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿತರಾದ ದೀಪಕ್ ಪೂಜಾರ್,ರಾಘವೇಂದ್ರ ಪೂಜಾರ್, ಅಮರ್ ಪೂಜಾರ್, ಶಂಕರ್ ಜಿತೂರಿ, ವಿಘ್ನೇಶ್ ಕೆಸರ್ ಕರ್, ಸಚಿನ್ ಹನುಮನಹಳ್ಳಿ, ಕುಶಾಲ್ ಬೆಳಂಕರ್, ಸಾಗರ್ ಲಕ್ಕುಂಡಿ ಈ ಎಲ್ಲಾ ಆರೋಪಿಗಳು ತಿಮ್ಮಸಾಗರ್ ರೋಡ್ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿರುತ್ತಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಳೆ ಹುಬ್ಬಳ್ಳಿಯ ಪೋಲಿಸ್ ಇನ್ಸ್ಪೆಕ್ಟರ್ ಸಬ್ ಇನ್ಸ್ಪೆಕ್ಟರ್ ಬಿ.ಎನ್. ಸಾತಣ್ಣನವರ್ ಹಾಗೂ ಸಿಬ್ಬಂದಿಗಳನ್ನು ಮಾನ್ಯ ಪೋಲಿಸ್ ಆಯುಕ್ತಕರು ಅಭಿನಂದಿಸಿದ್ದಾರೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *