ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಅಪರಾಧ ಸಾಬೀತು ಆಗಿದೆ. 23 ಜನರಿಗೆ ಇದೇ ಫೆಬ್ರವರಿ 24 ರಂದು ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಲಿದೆ.ಅದು 2017 ಫೆಬ್ರವರಿ 5 ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಯಾರು ಊಹೆ ಮಾಡದಂತ ಘಟನೆ ನಡೆದು ಹೋಗಿತ್ತು.ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಜನ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಲಿದೆ. ಫೆಬ್ರವರಿ 24 ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಮಾಡಲಿದೆ.ಅಂದು ಈ ಘಟನೆಯಿಂದ ಇಡೀ ರಾಜ್ಯವೇ ಬೆಚ್ವಿಬಿದ್ದಿತ್ತು. ಮರಳು ದಂಧೆಕೋರ ಅಟ್ಟಹಾಸಕ್ಕೆ ಖಾಕಿ ವಿಲವಿಲ ಅಂದಿತ್ತು. ಈಗ 23 ಜನರ ಅಪರಾಧ ಸಾಬೀತು ಆಗಿದ್ದು, ಫೆಬ್ರವರಿ 24 ರಂದು ಯಾವ ಕೋರ್ಟ್ ಯಾವ ಶಿಕ್ಷೆ ನೀಡುತ್ತೇ ಎನ್ನುವ ಕುತೂಹಲ ಕೆರಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

