Breaking News

ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಭಾರೀ ಗಿಫ್ಟ್‌ ನೀಡಿದ ಕೇಂದ್ರ ಸರ್ಕಾರ!

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಸಾದ ಯೋಜನೆಯ ಭಾಗವಾಗಿ ಬೆಳಗಾವಿಯ ಸವದತ್ತಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಮಾಡುವುದಾಗಿ ತಿಳಿಸಿದೆ. ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಸಾದ ಯೋಜನೆಯ ಅಡಿಯಲ್ಲಿ 18.37 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಮಾಹಿತಿ ನೀಡಿದ್ದಾರೆ.ಈ ಯೋಜನೆಯ ಅಡಿಯಲ್ಲಿ ತೀರ್ಥಯಾತ್ರೆ ಮತ್ತು ಪಾರಂಪರಿಕ ತಾಣಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಧಾರ್ಮಿಕ ಪ್ರವಾಸೋದ್ಯಮ ಅನುಭವವನ್ನು ಸುಧಾರಿಸುವುದು, ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಸುಸ್ಥಿರ ರೀತಿಯಲ್ಲಿ ತೀರ್ಥಯಾತ್ರೆ ತಾಣಗಳನ್ನು ಸಂಯೋಜಿಸುವುದು, ಜೀವನೋಪಾಯ, ಕೌಶಲ್ಯ, ಸ್ವಚ್ಛತೆ, ಭದ್ರತೆ, ಪ್ರವೇಶಸಾಧ್ಯತೆ ಮತ್ತು ಸೇವಾ ವಿತರಣೆಯ ಮೇಲೆ ಕೇಂದ್ರೀಕರಿಸುವ ಕಾರ್ಯಗಳನ್ನು ಮಾಡಬಹುದಾಗಿದೆ.

Share News

About BigTv News

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕುನಿಂದ ಕೊಲೆ ಯತ್ನ ನಗರದಲ್ಲಿ …

Leave a Reply

Your email address will not be published. Required fields are marked *