ಗುರುವಾರ ಮಧ್ಯಾಹ್ನದಿಂದ ಪತಿ ಮತ್ತು ಮಗ ಕಾಣೆಯಾಗಿದ್ದಾರೆ ಎಂದು ಮಗುವಿನ ತಾಯಿ ಚಂದನ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.ಪತ್ನಿಯ ಶೀಲ ಶಂಕಿಸಿ ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಐಟಿ ಎಂಜಿನಿಯರ್ ಮಾಧವ್ ಟಿಕೇಟಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಮಗುವನ್ನು ತನ್ನೊಂದಿಗೆ ಕರೆದೊಯ್ಯುವ ಮೊದಲು ಮಾಧವ್ ಚಾಕು ಮತ್ತು ಬ್ಲೇಡ್ ಖರೀದಿಸಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮೂಲತಃ ವಿಶಾಖಪಟ್ಟಣಂನವರಾದ ಮಾಧವ್ 2016 ರಲ್ಲಿ ಕೆಲಸಕ್ಕಾಗಿ ಪುಣೆಗೆ ತೆರಳಿದ್ದರು. ಅವರು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಮತ್ತು ಅವರ ವಿರುದ್ಧ ಕಾನೂನು ಕ್ರಮಗಳು ನಡೆಯುತ್ತಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

