Breaking News

ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಟೈಗರ್​ 3 ಚಿತ್ರೀಕರಣದಲ್ಲಿ ಬ್ಯುಸಿ…

ಮುಂಬೈ: ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಸದ್ಯ ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಟೈಗರ್​ 3’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟ ಸಲ್ಮಾನ್​ ಜೊತೆಗೆ ನಟಿಸುತ್ತಿರುವ ಈ ಚಿತ್ರ ಆ್ಯಕ್ಷನ್​ ಥ್ರಿಲ್ಲರ್​ ಆಗಿದ್ದು, ಈ ವರ್ಷ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸಿನಿಮಾದ ಹಾಡಿನ ಶೂಟಿಂಗ್​ನಲ್ಲಿ ನಟಿ ಹೆಜ್ಜೆ ಹಾಕಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕೊರಿಯಾಗ್ರಾಫ್​ ಹೇಳಿಕೊಟ್ಟಂತೆ ನಟಿ ಕತ್ರಿನಾ ಕೈಫ್​ ಹೆಜ್ಜೆ ಹಾಕಲು ತಾಲೀಮು ನಡೆಸುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ನಟಿ ಹಿಂದಿ ಸಹ ನಟಿಯರನ್ನು ಕಾಣಬಹುದಾಗಿದೆ. ಇನ್ನು ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಪ್ರಶಂಸೆಯ ಮಳೆ ಸುರಿಸಿದ್ದಾರೆ. ಅದ್ಬುತ ನೃತ್ಯ ಪ್ರದರ್ಶನದಿಂದ ಈಗಾಗಲೇ ಅಭಿಮಾನಿಗಳು ಸೇರಿದಂತೆ ಸಿನಿ ಕುಟುಂಬದ ಹಲವು ನಟ ನಟಿಯರ ಮೆಚ್ಚುಗೆ ನಟಿ ಕತ್ರಿನಾ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರ ನೃತ್ಯಕ್ಕೆ ಫಿದಾ ಆಗಿರುವುದಾಗಿ ತಿಳಿಸಿದ್ದಾರೆ. ಬಳಕೆದಾರರೊಬ್ಬರು, ಕ್ಯಾಟ್​ ಅನ್ನು ‘ನೃತ್ಯದಲ್ಲಿ ಮ್ಯಾಚ್​ ಮಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಡ್ಯಾನ್ಸ್​​ನಲ್ಲಿ ಆಕೆ ರಾಣಿ’ ಎಂದಿದ್ದಾರೆ. ಮತ್ತೊಬ್ಬರು ಅವರ ‘ಈ ಹಾಡಿಗಾಗಿ ಕಾಯುತ್ತಿರುವುದಾಗಿ’ ತಿಳಿಸಿದ್ದಾರೆ. ಆಕೆಯ ಸ್ಕ್ರೀನ್​ ಪ್ರೆಸೆನ್ಸ್​ ಅದ್ಬುತ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

Share News

About BigTv News

Check Also

ಮುಂಬೈ :ಅತ್ಯಾಚಾರ: ಐಪಿಎಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು!

ವೈದ್ಯ ಮತ್ತು ಆ ವ್ಯಕ್ತಿ ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕಕ್ಕೆ ಬಂದಿದ್ದಾರೆ. ಆಗ ಆರೋಪಿಯು ಕೇಂದ್ರ ಲೋಕಸೇವಾ …

Leave a Reply

Your email address will not be published. Required fields are marked *