Breaking News

ಶಿಕ್ಷಕರ ಬೇಡಿಕೆ ಈಡೇರದಿದ್ದರೆ ಅಹಿಂಸಾತ್ಮಕ ಚಳುವಳಿ ಹೋರಾಟ ಸತ್ಯಾಗ್ರಹ :ಸಜ್ಜನ


ಹುಬ್ಬಳ್ಳಿ :ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಶಿಕ್ಷಕರ ವಿವಿಧ ಬೇಡಿಕೆಗಳ ನೆನಗುದಿಗೆ ಬಿದ್ದಿದ್ದು, ಜೂನ್ ೧೫ ರೊಳಗೆ ಬೇಡಿಕೆ ಈಡೇರಿಸಬೇಕು
ಇಲ್ಲದಿದ್ದರೆ ಅಹಿಂಸಾತ್ಮಕ ಚಳುವಳಿ ಹೋರಾಟ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸರ್ಕಾರಕ್ಕೆ ಆಗ್ರಹಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಶೀಘ್ರವಾಗಿ ಕೇಂದ್ರ ಮಾದರಿ ಏಳನೇ ವೇತನ ಆಯೋಗ ಸಮಿತಿ ರಚಿಸಬೇಕು. ವಿಳಂವಾದಲ್ಲಿ ಶೇ. ಇಪ್ಪತೈದು ಮಧ್ಯಂತರ ಪರಿಹಾರ ನೀಡಬೇಕು, ಹೊಸ ಪಿಂಚಣಿ ಯೋಜನೆ ಕೈಬಿಟ್ಟು ಹಳೆ ಪಿಂಚಣಿ ಯೋಜನೆ ಶೀಘ್ರವಾಗಿ ಜಾರಿಗೊಳಿಸಬೇಕು, ಗ್ರಾಮೀಣ ಶಿಕ್ಷಕರಿಗೆ ೫ ಸಾವಿರ ರೂ. ಗ್ರಾಮೀಣ ಭತ್ಯೆ ನೀಡಬೇಕು, ವರ್ಗಾವಣೆ ಕಾಯ್ದೆ ತಿದ್ದುಪಡಿ ಮಾಡಿ ವರ್ಗಾವಣೆ ನಡೆಸಬೇಕು, ಆರು ವರ್ಷಗಳಲ್ಲಿ ಮೂರು ಬಾರಿ ಮಾತ್ರ ವರ್ಗಾವಣೆಯಾಗಿದ್ದು, ಈ ಕೂಡಲೇ ಈ ಸಾಲಿನ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕು, ಹೊಸ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಿ ಕಾರ್ಯಾಲಯ ಆರಂಭಿಸಬೇಕು, ಉ. ಕದಲ್ಲಿ ಬೃಹತ್ ಶಿಕ್ಷಕ ಸದನವನ್ನು ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ನಿರ್ಮಿಸಬೇಕು. ಸದ್ಯ ಬೆಂಗಳೂರಿನಲ್ಲಿ ಶಿಕ್ಷಕ ಸದನವನ್ನು ನವೀಕರಿಸಬೇಕು, ಕಲಿಕಾ ಚೇತನ ತರಬೇತಿಯನ್ನು ಮೇ ೧೫ ರ ನಂತರ ಪ್ರಾರಂಭಿಸಬೇಕು. ಶಾಲೆಗಳನ್ನು ಬೇಸಿಗೆ ರಜೆ ಪೂರ್ಣ ನೀಡಬೇಕು ಹಾಗೂ ಜೂ ೧ ಕ್ಕೆ ಶಾಲೆ ಪ್ರಾರಂಭಿಸಬೇಕು ಎಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.

ಇವೆಲ್ಲ ಬೇಡಿಕೆಗಳನ್ನು ಸರ್ಕಾರ ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಅನಿರ್ಧಿಷ್ಟವಧಿ ಹಾಗೂ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಸಂಘದ ರಾಜ್ಯ ಗೌರವಾಧ್ಯಕ್ಷ ಎಲ್.ಆಯ್. ಲಕ್ಕಮ್ಮನವರ, ಧಾರವಾಡ ಜಿಲ್ಲಾಧ್ಯಕ್ಷ ಅಕ್ಬರಲಿ ಸೊಲ್ಲಾಪುರ, ಉಪಾಧ್ಯಕ್ಷರಾದ ಮರಿತಮ್ಮಪ್ಪ ಅಕ್ಕಿ, ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಗ್ ಹಲವಾಯಿ, ಸಲಹಾ ಸಮಿತಿಯ ಗೋವಿಂದ ಜುಜಾರೆ ಮತ್ತಿತರರು ಉಪಸ್ಥಿತರಿದ್ದರು.

Share News

About admin

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *