Breaking News
Oplus_131072

ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ನಾದಿನಿ ಮೇಲೆ ಮಚ್ಚಿನಿಂದ ಹಲ್ಲೆ.!

ತಿಮ್ಮಪ್ಪ ಎನ್ನುವ ವ್ಯಕ್ತಿಯೇ ಈ ರೀತಿ ವಿಕೃತವಾಗಿ ದಾಳಿ ನಡೆಸಿದ್ದಾನೆ. ಆರೋಪಿ ತಿಮ್ಮಪ್ಪ ತನ್ನ ಪತ್ನಿ ಪದ್ಮಾವತಿ, ಪದ್ಮಾವತಿ ತಂಗಿ ಭೂದೇವಿಯನ್ನು ಮಚ್ಚಿನಿಂದ ಹೊಡೆದಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ.ತಿಮ್ಮಪ್ಪ ಪತ್ನಿ ಹಾಗೂ ನಾದಿನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸೋಕೆ ಕಾರಣವೇ ಆಸ್ತಿ. ಘಟನೆಯಲ್ಲಿ ಪದ್ಮಾವತಿಯ ಕೈ ಬೆರಳುಗಳು ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಮತ್ತೊಂದೆಡೆ ಅಕ್ಕನ ಜೊತೆಗಿದ್ದ ತಂಗಿಯ ಮುಂಗೈ ತುಂಗಾಡಿಗಿದ್ದು, ಸದ್ಯ ರಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮಚ್ಚಿನಿಂದ ದಾಳಿ ಮಾಡಿದ್ದ ತಿಮ್ಮಪ್ಪನನ್ನ ರಾಯಚೂರು ಗ್ರಾಮೀಣ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *